ನಾರ್ತ್‍ಬ್ಯಾಂಕ್ ಗ್ರಾಮದ ಬಳಿ ಕೆ.ಆರ್.ಸಾಗರ ಮುಖ್ಯ ರಸ್ತೆಯ್ಲಲಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಅಭಿಲಾಷ್.ಎಂ.ವೈ 3 ಸಾವಿರ ಕ್ಯೂಸ ನಾಲೆಯಲ್ಲಿ ಈಜಿ ಬೆಂಗಳೂರು ಮೂಲದ 3 ವರ್ಷ ಸಾಮ್ರಾಟ್ ಗಂಡು ಮಗು ರಕ್ಷಿಸಿರುವ ಘಟನೆ ಗುರವಾರ ಮದ್ಯಾಹ್ನ ನಡೆದಿದೆ.
- TV10 Kannada Exclusive
- October 7, 2022
- No Comment
- 104
ನಾರ್ತ್‍ಬ್ಯಾಂಕ್ ಗ್ರಾಮದ ಬಳಿ ಕೆ.ಆರ್.ಸಾಗರ ಮುಖ್ಯ ರಸ್ತೆಯ್ಲಲಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಅಭಿಲಾಷ್.ಎಂ.ವೈ 3 ಸಾವಿರ ಕ್ಯೂಸ ನಾಲೆಯಲ್ಲಿ ಈಜಿ ಬೆಂಗಳೂರು ಮೂಲದ 3 ವರ್ಷ ಸಾಮ್ರಾಟ್ ಗಂಡು ಮಗು ರಕ್ಷಿಸಿರುವ ಘಟನೆ ಗುರವಾರ ಮದ್ಯಾಹ್ನ ನಡೆದಿದೆ.
ಬೆಂಗಳೂರು ಮೂಲದ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ನಾರ್ತ್‍ಬ್ಯಾಂಕ್ ಕಾಳಮ್ಮ ದೇವಸ್ಥಾನದ ಬಳಿಯ ವಿಶ್ವೇಶ್ವರಯ್ಯ ನಾಲೆಯ ಮೆಟ್ಟಲುಗಳ ಬಳಿ ನಾಲೆಯ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮಗುವೊಂದು ನಾಲೆಯಲ್ಲಿ ಬಿದ್ದು ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಕಂಡು ತಾಯಿ ತನ್ನ ಮಗುವಿನ ರಕ್ಷಣೆಗೆ ಪಕ್ಕದಲ್ಲೆ ರಸ್ತೆಯಲ್ಲಿ ಸಹಾಯ ಬೇಡಿದಾಗ,
ಉತ್ತರ ಬೃಂದಾವನದ ಕಡೆಗೆ ಕರ್ತವ್ಯ ಕ್ಕೆ ಹೋಗುವ ಸಂದರ್ಭದಲ್ಲಿ ಮಗು ರಕ್ಷಣೆಗೆ ಸಹಾಯ ಕೋರಿದನ್ನು ಕಂಡು ಸ್ಕೂಟರ ನಲ್ಲಿ ಬರುತ್ತಿದ್ದ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಿರಿಯ ಅಭಿಯಂತರ ಅಭಿಲಾಷ್.ಎಂ.ವೈ ಏಕಾಏಕಿ 3 ಕ್ಯೂಸೆಕ್ ನೀರು ಹರಿಯುತ್ತಿದ್ದ ನಾಲೆಗೆ ಹಾರಿ ಮಗುವನ್ನು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ಕೂಡ ನೀಡಿ ಮಗ ರಕ್ಷಿಸಿದ್ದಾರೆ. ಮಗು ಪ್ರಾಣಾಪಯದಿಂದ ಪಾರಾಗಿದ್ದು,
ಇವರ ಸಹಾಯ ಮತ್ತು ರಕ್ಷಣೆಗೆ ಮಗುವಿನ ತಂದೆ- ತಾಯಿ ಧನ್ಯವಾದ ತಿಳಿಸಿದ್ದು, ಮತ್ತು ಸ್ಥಳದಲ್ಲಿದ್ದ, ಪಾದಚಾರಿಗಳು ಗ್ರಾಮಸ್ಥರು ಪ್ರಶಂಸಿದ್ದರು,
ಕೆ.ಆರ್.ಸಾಗರ ಕಾ.ನೀ.ನಿಗಮದ ಕಾರ್ಯಪಾಲಕ ಅಭಿಯಂತರ ರಾಮಮೂರ್ತಿ, ಗ್ರಾ.ಪಂ ಅಧ್ಯಕ್ಷ ನರಸಿಂಹ, ಕಾ.ನೀ.ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಗಳಾದ ಫಾರೂಕ್ ಅಭು, ಕಿಶೋರ್ ಕುಮಾರ್, ರಶ್ಮಿ, ಸರ್ಕಾರಿ ನೌಕರರ ಸಂಘ ಕೆ.ಆರ್.ಎಸ್ ಘಟಕದ ಅಧ್ಯಕ್ಷ ಶಿವಪ್ಪ, ಖಚಾಂಚಿ ನಾಗೇಶ್, ಇಂಜಿನಿಯರ್ ಗಳು ಸಿಬ್ಬಂದಿಗಳು, ಕಂಟ್ರಾಕ್ಟರ್ ರಾಮಣ್ಣ, ಪ್ರಕಾಶ್ ಸೇರಿದಂತೆ ಇತರರ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.