
ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರು ಬದಲಾವಣೆ ಸರಿ ಇಲ್ಲ…ಹಳ್ಳಿಹಕ್ಕಿ ಕಿಡಿ..
- Mysore
- October 8, 2022
- No Comment
- 115
ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರು ಬದಲಾವಣೆ ಸರಿ ಇಲ್ಲ…ಹಳ್ಳಿಹಕ್ಕಿ ಕಿಡಿ..
ಮೈಸೂರು,ಅ8,Tv10 ಕನ್ನಡ
ಟಿಪ್ಪು ಸುಲ್ತಾನ್ ಎಕ್ಸ್‌ಪ್ರೆಸ್ ಹೆಸರು ಬದಲಾವಣೆಗೆ ವಿಚಾರಕ್ಕೆ ಸಂಭಂಧಿಸಿದಂತೆ ಎಂಎಲ್ಸಿ ವಿಶ್ವನಾಥ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದರು.
ಒಡೆಯರ್ ಬಗ್ಗೆ ಅಪಾರ ಗೌರವ ಇದೆ.
ಹೊಸ ರೈಲು ತಂದು ಹೆಸರಿಡಬೇಕಿತ್ತು.
ಇದ್ದ ಹೆಸರು ಬದಲಾವಣೆ ಸರಿಯಲ್ಲ.
ಟಿಪ್ಪು ಸುಲ್ತಾನ್ ಹೆಸರು ಬದಲಾವಣೆ ಮಾಡಿದರೂ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವಿಲ್ಲ.ಮೈಸೂರು ಮಹಾರಾಜರು ಅಜರಾಮರ.
ಅದರಂತೆ ಟಿಪ್ಪು ಕೂಡ ನಮ್ಮ ಮನಸ್ಸಿನಲ್ಲಿದ್ದಾನೆ.
ಅದನ್ನ ಯಾವ ಸರ್ಕಾರ ಬಂದರು ತೆಗೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ…