
ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ…ಯಾವುದೇ ಕಾರಣಕ್ಕೂ ಇದು ಮತವಾಗಿ ಪರಿವರ್ತನೆಯಾಗುವುದಿಲ್ಲ…ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ…
- TV10 Kannada Exclusive
- October 8, 2022
- No Comment
- 246
ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ…ಯಾವುದೇ ಕಾರಣಕ್ಕೂ ಇದು ಮತವಾಗಿ ಪರಿವರ್ತನೆಯಾಗುವುದಿಲ್ಲ…ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ…
ಮೈಸೂರು,ಅ8,Tv10 ಕನ್ನಡ
ಎಸ್ಸಿ, ಎಸ್ಟಿ ಮೀಸಲಾತಿ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮೀಸಲಾತಿ ನೀಡುವುದರಿಂದ ತಮಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ.
ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆಯಾಗುವುದಿಲ್ಲ.ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಎರಡು ವರ್ಷದ ಹಿಂದೆಯೇ ವರದಿ ಕೊಟ್ಟಿದ್ದರು.
ಈಗ ಅದನ್ನ ಅನುಷ್ಠಾನ ಮಾಡುತ್ತಿದ್ದಾರೆ.ಅದರ ಅರ್ಥ ಏನು ಎಂಬುದು ಎಲ್ಲರಿಗೂ ಗೊತ್ತು.
ರಾಜಕೀಯ ಮುಖಂಡರುಗಳೇ ತಮಗಾಗಿ ತಮ್ಮ ಅನುಕೂಲಕ್ಕಾಗಿ ಮೀಸಲಾತಿ ಹೋರಾಟವನ್ನ ಹುಟ್ಟು ಹಾಕಿದ್ಧಾರೆ.
ಮುಂದೊಂದು ದಿನ ಅವರಿಗೆ ತಿರುಗು ಬಾಣ ಆಗುತ್ತದೆ.ಸರ್ಕಾರ ಜೇನುಗೂಡಿಗೆ ಕಲ್ಲು ಎಸೆಯುವ ಕೆಲಸ ಮಾಡುತ್ತಿದೆ ಎಂದು ಮೈಸೂರಿನಲ್ಲಿ ಹೇಳಿದ್ದಾರೆ…