
ತಾಯಿ ಸಾವು…ಖಿನ್ನತೆಗೆ ಒಳಗಾದ ಪುತ್ರ ನೇಣಿಗೆ ಶರಣು…
- Mysore
- October 20, 2022
- No Comment
- 139
ತಾಯಿ ಸಾವು…ಖಿನ್ನತೆಗೆ ಒಳಗಾದ ಪುತ್ರ ನೇಣಿಗೆ ಶರಣು…
ಮೈಸೂರು,ಅ20,Tv10 ಕನ್ನಡ
ತಾಯಿ ಸಾವಿನಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಪುತ್ರ ನೇಣಿಗೆ ಶರಣಾದ ಘಟನೆ ಮೈಸೂರಿನ ದತ್ತ ನಗರದಲ್ಲಿ ನಡೆದಿದೆ.ಮಹದೇವ್(55) ಮೃತ ದುರ್ದೈವಿ.ಕಳೆದ ವರ್ಷ ಮಹದೇವ್ ರವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು.ಅಂದಿನಿಂದ ಮಹದೇವ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು.ತಾಯಿಯ ಅಗಲಿಕೆಯಿಂದ ಮನನೊಂದಿದ್ದ ಮಹದೇವ್ ಅನಾರೋಗ್ಯಕ್ಕೆ ಒಳಗಾಗಿದ್ದರು.ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹದೇವ್ ನೇಣಿಗೆ ಶರಣಾಗಿದ್ದಾರೆ.ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…