
ಟಿ 20 ವಿಶ್ವಕಪ್…ಇಂದು ಭಾರತ ಪಾಕ್ ಹೈವೋಲ್ಟೇಜ್ ಪಂದ್ಯ…ಬ್ಲೂ ಬಾಯ್ಸ್ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳಿಂದ ವಿಶೇಷ ಪೂಜೆ…
- TV10 Kannada Exclusive
- October 23, 2022
- No Comment
- 110
ಟಿ 20 ವಿಶ್ವಕಪ್…ಇಂದು ಭಾರತ ಪಾಕ್ ಹೈವೋಲ್ಟೇಜ್ ಪಂದ್ಯ…ಬ್ಲೂ ಬಾಯ್ಸ್ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳಿಂದ ವಿಶೇಷ ಪೂಜೆ…
ಮೈಸೂರು,ಅ23,Tv10 ಕನ್ನಡ
ಟಿ20 ವಿಶ್ವಕಪ್ ಹವಾ ಕ್ರಿಕೆಟ್ ಪ್ರೇಮಿಗಳಲ್ಲಿ ಉತ್ಸಾಹ ತುಂಬಿದೆ.ಇಂದು ಭಾರತ v/s ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನ ಬಗ್ಗುಬಡಿದು ಭಾರತ ಗೆದ್ದು ಬರಲಿ ಎಂದು ಮೈಸೂರಿನ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ನೆರವೇರಿಸಿದರು.ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ರೋಹಿತ್ ಶರ್ಮಾ ಪಡೆ ವಿಜಯೋತ್ಸವ ಆಚರಿಸಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಘೋಷಣೆ ಕೂಗಿ ಶುಭ ಕೋರಿದರು. ಅಭಿಷೇಕ ಹಾಗೂ ಪೂಜೆಯನ್ನು ನೆರವೇರಿಸಿ ಗುಡ್ ಲಕ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರಿಕೆಟ್ ಪ್ರೇಮಿ ಮಧು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ವಿಶ್ವಕಪ್ ನಲ್ಲಿ ಬಗ್ಗು ಬಡಿಯಲಿ. ಟೂರ್ನಮೆಂಟ್ ನ ಪ್ರತಿಯೊಂದು ಪಂದ್ಯವನ್ನು ಭಾರತ ಗೆಲ್ಲಲಿ ಹಾಗೂ ಇವತ್ತಿನ ಪಂದ್ಯದಲ್ಲಿ ಕ್ರಿಕೆಟ್ ಬ್ಯಾಟ್ಸ್ ಮನ್ ಹಾಗೂ ಬೌಲರ್ ಗಳು ಅತ್ಯುತ್ತಮವಾಗಿ ಪಂದ್ಯವನ್ನು ಆಡಿ ಗೆದ್ದು ಬರಲಿ ಮತ್ತು ನಾಳಿನ ದೀಪಾವಳಿ ಹಬ್ಬಕ್ಕೆ ಭಾರತ ತಂಡ ಪಂದ್ಯವನ್ನು ಗೆದ್ದು ಸಮಸ್ತ ಭಾರತೀಯರಿಗೆ ದೀಪಾವಳಿ ಉಡುಗೊರೆ ಕೊಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಲೋಹಿತ್,ಜೀವನ್ ಹಾಗೂ ಸಮಾಜ ಸೇವಕರಾದ ಚಕ್ರಪಾಣಿ ಹಾಗೂ ಬಳಗದ ಸದಸ್ಯರಾದ ಪೃಥ್ವಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಮೂರ್ತಿ ಎಲ್ಲ ಸದಸ್ಯರು ಉಪಸ್ಥಿತರಿದ್ದರು…