
ಸೂರ್ಯಗ್ರಹಣದ ವೇಳೆ ಅಪಘಾತ…ಯುವತಿಯೊಂದಿಗೆ ತೆರಳುತ್ತಿದ್ದ ಯುವಕ ಸ್ಥಳದಲ್ಲೇ ಸಾವು…ಸ್ನೇಹಿತೆ ಗಂಭೀರ…ಇಲವಾಲದ ಬೀರಿಹುಂಡಿ ಬಳಿ ದುರಂತ…
- Uncategorized
- October 26, 2022
- No Comment
- 165
ಸೂರ್ಯಗ್ರಹಣದ ವೇಳೆ ಅಪಘಾತ…ಯುವತಿಯೊಂದಿಗೆ ತೆರಳುತ್ತಿದ್ದ ಯುವಕ ಸ್ಥಳದಲ್ಲೇ ಸಾವು…ಸ್ನೇಹಿತೆ ಗಂಭೀರ…ಇಲವಾಲದ ಬೀರಿಹುಂಡಿ ಬಳಿ ದುರಂತ…
Eclipse#Accident#mysore#
ಸೂರ್ಯಗ್ರಹಣದ ವೇಳೆ ನಡೆದ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಯುವತಿ ಸ್ಥಿತಿ ಗಂಭೀರವಾಗಿದೆ.ಇಲವಾಲದ ಬೀರಿಹುಂಡಿ ಸಮೀಪ ಘಟನೆ ನಡೆದಿದೆ.ಬೈಕ್ ನಲ್ಲಿ ತೆರಳುತ್ತಿದ್ದ ಜೋಡಿಗೆ ಪಿಕ್ ಅಪ್ ಜೀಪ್ ಢಿಕ್ಕಿ ಹೊಡದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಗಂಭೀರವಾಗಿ ಗಾಯಗೊಂಡ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಿಳಿಕೆರೆ ನಿವಾಸಿ ವಿಶ್ವಾಚಾರಿ(22) ಮೃತ ದುರ್ದೈವಿ.ಗ್ರಹಣ ಹಿಡಿಯುವ ವೇಳೆ ಸ್ನೇಹಿತೆಯೊಂದಿಗೆ ದೇವಸ್ಥಾನವೊಂದಕ್ಕೆ ತೆರಳಿ ಹಿಂದಿರುಗುವಾಗ ಬೀರಿಹುಂಡಿ ಬಳಿ ನಿನ್ನೆ ಸಂಜೆ 5.30 ರಲ್ಲಿ ದುರ್ಘಟನೆ ನಡೆದಿದೆ.ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…