
ಸರಸ್ವತಿಪುರಂ ಠಾಣಾ ಪೊಲೀಸರ ಕಾರ್ಯಾಚರಣೆ…ಸರಗಳ್ಳನ ಬಂಧನ…13 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ…
- CrimeMysore
- November 1, 2022
- No Comment
- 168
ಸರಸ್ವತಿಪುರಂ ಠಾಣಾ ಪೊಲೀಸರ ಕಾರ್ಯಾಚರಣೆ…ಸರಗಳ್ಳನ ಬಂಧನ…13 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ…
ಮೈಸೂರು,ನ1,Tv10 ಕನ್ನಡ
ಸರಸ್ವತಿಪುರಂ ಠಾಣಾ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಸರಗಳ್ಳನನ್ನ ಬಂಧಿಸಿ 13 ಲಕ್ಷ ಮೌಲ್ಯದ ಚಿನ್ನದ ಸರಗಳನ್ನ ವಶಪಡಿಸಿಕೊಳ್ಳಲಾಗಿದೆ.ಮತ್ತೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ವಿವಿದ ಠಾಣಾ ವ್ಯಾಪ್ತಿಯಲ್ಲಿ ನಡೆದ 8 ಸರಗಳ್ಳತನ ಪತ್ತೆಯಾದಂತಾಗಿದೆ.ಬಂಧಿತನಿಂದ 13 ಲಕ್ಷ ಮೌಲ್ಯದ 290 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.
ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ,ಕೆ.ಆರ್.ಉಪವಿಭಾಗದ ಎಸಿಪಿ ಗಂಗಾದರ ಸ್ವಾಮಿ ನೇತೃತ್ವದಲ್ಲಿ ಸರಸ್ವತಿಪುರಂ ಠಾಣೆಯ ಇನ್ಸ್ಪೆಕ್ಟರ್ ರವೀಂದ್ರ ಹಾಗೂ ಪಿಎಸ್ಸೈ ಸ್ಮಿತಾ ಹಾಗೂ ಸಿಬ್ಬಂದಿಗಳಾದ ರಾಜು,ನಾರಾಯಣಶೆಟ್ಟಿ,ಲೋಕೇಶ್,ಮೋಹನ್ ಕುಮಾರ್,ರಾಘವೇಂದ್ರ,ಉಮೇಶ್,ಮಂಜು,ಬಸವರಾಜು,ಮನ್ಯಾಳ್,ಪವನ್,ರವಿಕುಮಾರ್,ಮಹೇಶ್,ಸಾಗರ್,ಸುರೇಶ್,ಹರೀಶ್ ಕುಮಾರ್,ವೆಂಕಟೇಶ್,ಶ್ರೀನಿವಾಸ್,ಸೋಮಶೇಖರ್,ಶಿಲ್ಪಾ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…