ವಾರಸುದಾರರಿಲ್ಲದ ಆಸ್ತಿ ಕಬಳಿಕೆ ಸಂಚು ಪ್ರಕರಣ…ಮಾಜಿ ಎಂಎಲ್ ಎ ಕುಟುಂಬದ ಮೂವರ ಮೇಲೆ FIR ದಾಖಲು…Tv10 ಕನ್ನಡ ವರದಿ ಫಲಶೃತಿ…

ವಾರಸುದಾರರಿಲ್ಲದ ಆಸ್ತಿ ಕಬಳಿಕೆ ಸಂಚು ಪ್ರಕರಣ…ಮಾಜಿ ಎಂಎಲ್ ಎ ಕುಟುಂಬದ ಮೂವರ ಮೇಲೆ FIR ದಾಖಲು…Tv10 ಕನ್ನಡ ವರದಿ ಫಲಶೃತಿ…

ವಾರಸುದಾರರಿಲ್ಲದ ಆಸ್ತಿ ಕಬಳಿಕೆ ಸಂಚು ಪ್ರಕರಣ…ಮಾಜಿ ಎಂಎಲ್ ಎ ಕುಟುಂಬದ ಮೂವರ ಮೇಲೆ FIR ದಾಖಲು…Tv10 ಕನ್ನಡ ವರದಿ ಫಲಶೃತಿ…

ಮೈಸೂರು,ನ5,Tv10 ಕನ್ನಡ

  • 20 ಕೋಟಿ ಮೌಲ್ಯದ ಆಸ್ತಿ ಕಬಳಿಕೆ ಸಂಚು ವಿಫಲ
  • 3 ಎಕ್ರೆ 21 ಗುಂಟೆ ಎಕ್ರೆ ಜಮೀನು ಸೇಫ್
  • RTI ಮೂಲಕ ಬಹಿರಂಗವಾದ ಅಕ್ರಮ
  • ಮಾಜಿ ಎಂಎಲ್ ಎ ಕುಟುಂಬದ ಮೂವರ ವಿರುದ್ದ FIR
  • Tv10 ಕನ್ನಡ ವಾಹಿನಿ ಸುದ್ದಿ ಇಂಪ್ಯಾಕ್ಟ್

ವಾರಸುದಾರರಿಲ್ಲ ಆಸ್ತಿ ಕಬಳಿಸಲು ಸಂಚು ರೂಪಿಸಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವೆಸಗಿದ್ದ ಮಾಜಿ ಎಂ.ಎಲ್.ಎ ಕುಟುಂಬದ ಮೂವರ ವಿರುದ್ದ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಟಿ.ನರಸೀಪುರ ಕ್ಷೇತ್ರದ ಮಾಜಿ ಎಂ.ಎಲ್.ಎ.ದಿ.ಶ್ರೀನಿವಾಸ ಅಯ್ಯಂಗಾರ್ ರವರ ಸೊಸೆ ಲಲಿತಾ ಜಯಗೋಪಾಲ್,ಮೊಮ್ಮಗ ಸುಧೀರ್ ಜಯಗೋಪಾಲ್,ಮೊಮ್ಮಗಳು ಸುಮನ್ ಜಯಗೋಪಾಲ್ ರವರ ಮೇಲೆ FIR ದಾಖಲಾಗಿದೆ.20 ಕೋಟಿ ಮೌಲ್ಯದ 3 ಎಕ್ರೆ 21 ಗುಂಟೆ ಜಮೀನು ಕಬಳಿಸಲು ನಡೆಸಿದ ಸಂಚು ವಿಫಲವಾಗಿದೆ.RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ದಾಖಲೆ ಸಮೇತ ಅಕ್ರಮ ಬಯಲು ಮಾಡಿದ್ದು Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿತ್ತು.ಇದು Tv10 ಕನ್ನಡ ವಾಹಿನಿಯ ಇಂಪ್ಯಾಕ್ಟ್ ಆಗಿದೆ.

ಮೈಸೂರು ತಾಲೂಕು ವರುಣ ಹೋಬಳಿ ಲಲಿತಾದ್ರಿಪುರ ಗ್ರಾಮದ ಸರ್ವೆ ನಂ206 ರ 3 ಎಕ್ರೆ 21 ಗುಂಟೆ ಜಮೀನು ಸರ್ಕಾರಿ ಬೀಳು.ನಂತರದ ದಿನಗಳಲ್ಲಿ ಮೇಲುಕೋಟೆ ವಜ್ರಂಶಿಂಗಯ್ಯಂಗಾರ್ ರವರಿಗೆ ಖಾತೆ ಆಗಿದೆ.ಸಧ್ಯ RTC ಮೇಲುಕೋಟೆ ವಜ್ರಂಅಯ್ಯಂಗಾರ್ ಹೆಸರಿನಲ್ಲಿದೆ.ಸದರಿ ಆಸ್ತಿಗೆ ವಾರಸುದಾರರು ಇಲ್ಲದಿರುವುದನ್ನ ಪತ್ಯೆ ಹಚ್ಚಿದ ಮಾಜಿ ಎಂ.ಎಲ್.ಎ.ದಿ ಶ್ರೀನಿವಾಸ ಅಯ್ಯಂಗಾರ್ ಸೊಸೆ ಲಲಿತಾ ಜಯಗೋಪಾಲ್,ಮೊಮ್ಮಗ ಸುದೀರ್ ಜಯಗೋಪಾಲ್,ಮೊಮ್ಮಗಳು ಸುಮನ್ ಜಯಗೋಪಾಲ್ ರವರು ನಕಲಿ ವಂಶವೃಕ್ಷ ಸೃಷ್ಟಿಸಿ ಪೌತಿಖಾತೆ ಮಾಡಿಸಿಕೊಳ್ಳಲು ಮೈಸೂರು ತಾಲೂಕು ಕಚೇರಿಗೆ ದಾಖಲೆಗಳನ್ನ ಸಲ್ಲಿಸಿದ್ದಾರೆ.ಇದರ ಮಾಹಿತಿ ಅರಿತ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ಸಂಪೂರ್ಣ ದಾಖಲೆಗಳನ್ನ ಪಡೆದು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ತಹಸೀಲ್ದಾರ್ ಎನ್. ವಿಶ್ವನಾಥ್ ರವರಿಗೆ ಸೂಚನೆ ನೀಡಿದ್ದರು.ದಾಖಲೆಗಳನ್ನ ಪರಿಶೀಲಿಸಿದ ವಿಶ್ವನಾಥ್ ಅಕ್ರಮವನ್ನ ಖಚಿತಪಡಿಸಿಕೊಂಡು ಸಂಭಂಧಪಟ್ಟ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವರುಣಾ ರೆವಿನ್ಯೂ ಇನ್ಸ್ಪೆಕ್ಟರ್ ಶಂಕರ್ ಗೆ ಆದೇಶಿಸಿದ್ದರು.ಈ ಅಕ್ರಮವನ್ನ Tv10 ಕನ್ನಡ ವಾಹಿನಿ ಇತ್ತೀಚೆಗೆ ಸುದ್ದಿ ಪ್ರಸಾರ ಮಾಡಿತ್ತು.ಇದೀಗ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ FIR ದಾಖಲಾಗಿದೆ.20 ಕೋಟಿ ಮೌಲ್ಯದ ಆಸ್ತಿ ಸೇಫ್ ಆಗಿದೆ.ಇದು Tv10 ವರದಿ ಫಲಶೃತಿಯೂ ಆಗಿದೆ.ನಕಲಿ ದಾಖಲೆ ಸೃಷ್ಟಿಸಿ ಅಕ್ರಮಕ್ಕೆ ಸಾಥ್ ನೀಡಿದ ಮೈಸೂರು ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ ಲಿಖಿತ ದೂರು ನೀಡಿದ್ದಾರೆ…

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *