- November 6, 2022
ಅಸ್ವಸ್ಥ ಅಪರಿಚಿತ ವೃದ್ದನ ನೆರವಿಗೆ ಬಂದ ಸಾರ್ವಜನಿಕರು…ವಾರಸುದಾರರಿಗಾಗಿ ಪೊಲೀಸರ ಹುಡುಕಾಟ…

ಅಸ್ವಸ್ಥ ಅಪರಿಚಿತ ವೃದ್ದನ ನೆರವಿಗೆ ಬಂದ ಸಾರ್ವಜನಿಕರು…ವಾರಸುದಾರರಿಗಾಗಿ ಪೊಲೀಸರ ಹುಡುಕಾಟ…
ಕೆ.ಆರ್.ಎಸ್.ನ6,Tv10 ಕನ್ನಡ
ಅಸ್ವಸ್ಥನಾಗಿ ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ದನನ್ನ ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಸಾರ್ವಜನಿಕರು ಮಾನವೀಯತೆ ಮೆರೆದ ಘಟನೆ ಕೆ.ಆರ್.ಎಸ್.ನಲ್ಲಿ ನಡೆದಿದೆ.ಸುಮಾರು 60 ರಿಂದ 65 ವರ್ಷ ವಯಸ್ಸಿನ ಅಪರಿಚಿತ ವೃದ್ದ ಬಲಮುರಿ ದೇವಸ್ಥಾನದ ಬಳಿ ಅಸ್ವಸ್ಥರಾಗಿ ಕಂಡು ಬಂದಿದ್ದಾರೆ.ಕೆಲವು ಸಾರ್ವಜನಿಕರು ವೃದ್ದನ ನೆರವಿಗೆ ಬಂದು ಆಂಬ್ಯುಲೆನ್ಸ್ ಮೂಲಕ ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ.ವೃದ್ದ ವಿವರ ಲಭ್ಯವಾಗಿಲ್ಲ.ಕೆ.ಆರ್.ಎಸ್.ಠಾಣೆ ಪೊಲೀಸರು ವೃದ್ದನ ವಾರಸುದಾರರಿಗಾಗಿ ಹುಡುಕಾಟ ನಡೆಸಿದ್ದಾರೆ.ಸಂಭಂಧಪಟ್ಟವರು ಕಂಡು ಬಂದಲ್ಲಿ ಕೆ.ಆರ್.ಎಸ್.ಠಾಣೆಗೆ ಮಾಹಿತಿ ನೀಡಬಹುದಾಗಿದೆ…