
ವಿದ್ಯುತ್ ಸ್ಪರ್ಷಿಸಿ ಮೂವರ ಸಾವು…ಟಿ.ನರಸೀಪುರದಲ್ಲಿ ದುರ್ಘಟನೆ…
- CrimeMysore
- November 6, 2022
- No Comment
- 149
ವಿದ್ಯುತ್ ಸ್ಪರ್ಷಿಸಿ ಮೂವರ ಸಾವು…ಟಿ.ನರಸೀಪುರದಲ್ಲಿ ದುರ್ಘಟನೆ…

ಟಿ.ನರಸೀಪುರ,ನ6,Tv10 ಕನ್ನಡ
ವಿದ್ಯುತ್ ಸ್ಪರ್ಶದಿಂದ ಮೂವರು ಸಾವನ್ನಪ್ಪಿದ ಘಟನೆ ಟಿ.ನರಸೀಪುರದ ನೀಲಸೋಗೆ ಗ್ರಾಮದಲ್ಲಿ ನಡೆದಿದೆ. ಗದ್ದೆಗೆ ಔಷಧಿ ಸಿಂಪಡಿಸಲು ಹೋಗಿದ್ದ ವೇಳೆಯಲ್ಲಿ ಘಟನೆ ನಡೆದಿದೆ.ದುರ್ಘಟನೆಯಲ್ಲಿ ಜಮೀನು ಮಾಲೀಕ ರಾಜೇಗೌಡ (62 ) ಮಗ ಹರೀಶ್ (30 ) ಮತ್ತು ಮಹಾದೇವಸ್ವಾಮಿ(33) ಮೃತ ದುರ್ದೈವಿಗಳಾಗಿದ್ದಾರೆ.,ಮುಂಜಾನೆ ಜಮೀನಿಗೆ ಔಷಧಿ ಸಿಂಪಡಿಸಲು ಹೋಗಿದ್ದ ವೇಳೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸಂಪರ್ಕಿಸಿದ ಪರಿಣಾಮ ದುರ್ಘಟನೆ ನಡೆದಿದೆ.ಸ್ಥಳಕ್ಕೆ ಶಾಸಕ ಎಂ. ಅಶ್ವಿನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸರ್ಕಾರದಿಂದ ಸಿಗುವ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಡಿವೈಎಸ್ಪಿ ವಿ. ಗೋವಿಂದರಾಜು, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…