
ಎತ್ತಿನಗಾಡಿಯಲ್ಲಿ ಮಾಹಿತಿ ಹಕ್ಕು ದಾಖಲೆ ಕೊಂಡೊಯ್ದ RTI ಕಾರ್ಯಕರ್ತ…ಡೋಲು ಹೊಡೆದು ಸಂಭ್ರಮ…
- TV10 Kannada Exclusive
- November 6, 2022
- No Comment
- 150

ಎತ್ತಿನಗಾಡಿಯಲ್ಲಿ ಮಾಹಿತಿ ಹಕ್ಕು ದಾಖಲೆ ಕೊಂಡೊಯ್ದ RTI ಕಾರ್ಯಕರ್ತ…ಡೋಲು ಹೊಡೆದು ಸಂಭ್ರಮ…
Tv10 ಕನ್ನಡ
ಮಾಹಿತಿ ಹಕ್ಕಿನಲ್ಲಿ ದೊರೆತ ದಾಖಲೆಗಳನ್ನ ಆರ್.ಟಿ.ಐ.ಕಾರ್ಯಕರ್ತನೊಬ್ಬ ಸಂಭ್ರಮದಿಂದ ಡೋಲು ಹೊಡೆಯುತ್ತಾ ಎತ್ತಿನಗಾಡಿಯಲ್ಲಿ ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬೈರಾಡ್ ನಗರದಲ್ಲಿ ನಡೆದಿದೆ.ಮಖಾನ್ ಧಡಕ್ ಎಂಬಾತ ಹೀಗೆ ಸಂಭ್ರಮಿಸಿದ್ದಾನೆ.ಪ್ರಧಾನ ಮಂತ್ರಿ ಆವಾಜ್ ಯೋಜನೆಗೆ ಸಂಭಂಧಿಸಿದಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.ಮಾಹಿತಿಯ ದಾಖಲೆ ಒದಗಿಸಲು 25 ಸಾವಿರ ಪ ಶುಲ್ಕ ಪಾವತಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.ಸ್ನೇಹಿತರ ಬಳಿ ಸಾಲ ಮಾಡಿದ ಮಖಾನ್ ಧಡಕ್ ಹಣ ಪಾವತಿಸಿದ್ದಾರೆ.ಎರಡು ತಿಂಗಳ ನಂತರ 9000 ಪುಟಗಳ ದಾಖಲೆಗಳನ್ನ ಜಿಲ್ಲಾಡಳಿತ ನೀಡಿದೆ.ದಾಖಲೆಗಳನ್ನ ಎತ್ತಿನಗಾಡಿಯಲ್ಲಿ ಡೋಲಿನ ಸಮೇತ ಸಂಭ್ರಮದಿಂದ ಸಾಗಿಸಿದ್ದಾರೆ…