
ಸಾಲಬಾಧೆ ಹಿನ್ನಲೆ…ರೈತ ಆತ್ಮಹತ್ಯೆ…
- CrimeMysore
- November 10, 2022
- No Comment
- 125
ಸಾಲಬಾಧೆ ಹಿನ್ನಲೆ…ರೈತ ಆತ್ಮಹತ್ಯೆ…
ಮೈಸೂರು,ನ10,Tv10 ಕನ್ನಡ
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾದ ಘಟನೆ
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಿರಂಗೂರು ಗ್ರಾಮದಲ್ಲಿ ನಡೆದಿದೆ.
ಕೆ.ಬಿ.ರಾಮು (38) ಮೃತ ರೈತ.
ವ್ಯವಸಾಯಕ್ಕಾಗಿ ಕೈ ಸಾಲ ಹಾಗೂ ಪತ್ನಿ ಹೆಸರಿನಲ್ಲಿ ಸ್ವಸಹಾಯ ಸಂಘಗಳಲ್ಲೂ ರಾಮು ಸಾಲ ಪಡೆದಿದ್ದರು.
ಸಾಲ ತೀರಿಸಲಾಗದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…