
ಚಾಕುವಿನಿಂದ ಇರಿದು ಯುವಕನ ಕೊಲೆ…ಹಳೇ ದ್ವೇಷ ಹಿನ್ನಲೆ ಕೃತ್ಯ…
- CrimeMysore
- November 10, 2022
- No Comment
- 139
ಚಾಕುವಿನಿಂದ ಇರಿದು ಯುವಕನ ಕೊಲೆ…ಹಳೇ ದ್ವೇಷ ಹಿನ್ನಲೆ ಕೃತ್ಯ…
ಮೈಸೂರು,ನ10,Tv10 ಕನ್ನಡ
ಮೈಸೂರಿನಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆಯಾಗಿದೆ.
ಮನೋಜ್ (24) ಮೃತ ಧುರ್ದೈವಿ.
ಮೈಸೂರು ತಾಲ್ಲೂಕು ಮೆಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮೆಲ್ಲಹಳ್ಳಿ ನಿವಾಸಿಗಳಾದ ರಮೇಶ್, ಕಿರಣ್,ಶಂಕರ್.ಆ.ಚಂಡಿ ರಿಂದ ಕೃತ್ಯ ನಡೆದಿದೆ. ಮನೋಜ್ ಹಾಗೂ ಆರೋಪಿಗಳು ಒಂದೇ ಗ್ರಾಮದವರು.
ಸಣ್ಣ ಪುಟ್ಟ ವಿಚಾರಕ್ಕೆ ಆಗಾಗ ಗ್ರಾಮದಲ್ಲಿ ಗಲಾಟೆ ನಡೆಯುತ್ತಿತ್ತು.
ಹುಟ್ಟುಹಬ್ಬ ಆಚರಣೆ ವಿಚಾರ ಸೇರಿ ಹಲವು ವಿಚಾರದಲ್ಲಿ ಗಲಾಟೆ ನಡೆದಿದೆ.
ಇದೇ ಕಾರಣಕ್ಕಾಗಿ ಚಾಕುವಿನಿಂದ ಇರಿದು ಕೊಲೆ ನಡೆದಿದೆ ಎನ್ನಲಾಗಿದೆ.
ಮನೆಗೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಚಾಕು ಇರಿದಿದ್ದಾರೆ.
ಚಾಕು ಇರಿದ ಆರೋಪಿಗಳು ಪರಾರಿಯಾಗಿದ್ದಾರೆ.
ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…