
ಕಬ್ಬಿನ ಬೆಲೆ ನಿಗದಿಗೆ ಭರವಸೆ ಹಿನ್ನಲೆ…ಅಹೋರಾತ್ರಿ ಧರಣಿ ಕೈಬಿಟ್ಟ ಅನ್ನದಾತರು…
- TV10 Kannada Exclusive
- November 10, 2022
- No Comment
- 117
ಕಬ್ಬಿನ ಬೆಲೆ ನಿಗದಿಗೆ ಭರವಸೆ ಹಿನ್ನಲೆ…ಅಹೋರಾತ್ರಿ ಧರಣಿ ಕೈಬಿಟ್ಟ ಅನ್ನದಾತರು…
ಮೈಸೂರು,ನ10,Tv10 ಕನ್ನಡ
ಕಬ್ಬು ಹೆಚ್ಚುವರಿ ಬೆಲೆ ನಿಗದಿಗಾಗಿ ಆರಂಭಿಸಿದ್ದ ಅಹೋರಾತ್ರಿ ಧರಣಿಯನ್ನ ರೈತರು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ.ರಾಜ್ಯ ಕಬ್ಬು ಬೆಳೆಗಾರ ಸಮಿತಿ ಕೈಗೊಂಡ ತೀರ್ಮಾನದ ಹಿನ್ನಲೆ ರೈತರು ಧರಣಿಯನ್ನ ಹಿಂಪಡೆದಿದ್ದಾರೆ. ಕಬ್ಬು ಬೆಲೆ ನಿಗದಿ ವಿಚಾರವಾಗಿ ರಾಜ್ಯ ಸರ್ಕಾರ 20 ರ ಒಳಗಾಗಿ ಹೆಚ್ಚುವರಿ ಬೆಲೆ ನಿಗದಿ ಮಾಡುವ ಭರವಸೆ ನೀಡಿರುವ ಹಿನ್ನಲೆ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ರೈತರ ಕುಂದು ಕೊರತೆ ಸಭೆಯನ್ನು ಕರೆಯದೆ ಇದ್ದರೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಮಿತಿಯಿಂದ ಸಚಿವರಾದ ಎಸ್ ಟಿ ಸೋಮಶೇಖರ್ ರವರು ಯಾವುದೇ ಕಾರ್ಯಕ್ರಮಕ್ಕೆ ಬಂದರು ಸಹ ಅವರಿಗೆ ಕಪ್ಪು ಬಾವುಟ ಹಾಗೂ ಉಗಿಯುವ ಚಳುವಳಿ ಮಾಡಲಾಗುವುದು ಜಿಲ್ಲಾಧ್ಯಕ್ಷ ಪಿ ಸೋಮಶೇಖರ್ ರವರು ಎಚ್ಚರಿಸಿದ್ದಾರೆ…