
ಮೈಸೂರು…ಜಿಮ್ ಟ್ರೈನರ್ ಪತ್ನಿ ಅನುಮಾನಸ್ಪದ ಸಾವು…ಪೋಷಕರಿಂದ ಕೊಲೆ ಆರೋಪ…
- CrimeMysore
- November 12, 2022
- No Comment
- 145
ಮೈಸೂರು…ಜಿಮ್ ಟ್ರೈನರ್ ಪತ್ನಿ ಅನುಮಾನಸ್ಪದ ಸಾವು…ಪೋಷಕರಿಂದ ಕೊಲೆ ಆರೋಪ…
ಮೈಸೂರು,ನ12,Tv10 ಕನ್ನಡ
ಜಿಮ್ ಟ್ರೈನರ್ ಪತ್ನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂಬಾ ಮಸೀದಿ ಬಳಿ ನಡೆದಿದೆ.ಜಿಮ್ ಟ್ರೈನರ್ ಸೈಯದ್ ಉಮರ್ ಪತ್ನಿ ಸರ್ನಮ್ ಖಾನ್ (21) ಮೃತ ದುರ್ದೈವಿ.ರಾತ್ರಿ ಮಲಗಿದ್ದ ಸರ್ನಮ್ ಖಾನ್ ಬೆಳಿಗ್ಗೆ ಮೃತದೇಹವಾಗಿ ಪತ್ತೆಯಾಗಿದ್ದಾರೆ.ಸರ್ನಮ್ ಖಾನ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪೋಷಕರು ಕೊಲೆ ಮಾಡಿದ್ದಾನೆಂದು ದೂರು ನೀಡಿದ್ದಾರೆ.ಮಂಡ್ಯ ಜಿಲ್ಲೆಯ ಸರ್ನಮ್ ಖಾನ್ 3 ವರ್ಷಗಳ ಹಿಂದೆ ಜಿಮ್ ಟ್ರೈನರ್ ಸೈಯದ್ ಉಮರ್ ನನ್ನ ವಿವಾಹವಾಗಿದ್ದರು.ಮದುವೆ ಸಂಧರ್ಭದಲ್ಲಿ ಸಾಕಷ್ಟು ವರದಕ್ಷಿಣೆ ನೀಡಲಾಗಿತ್ತು.ಆಗಾಗ ಹಣಕ್ಕಾಗಿ ಪತ್ನಿಯನ್ನ ಪೀಡಿಸುತ್ತಿದ್ದ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.ವರದಕ್ಷಿಣೆಗಾಗಿ ಮಗಳನ್ನ ಕೊಲೆ ಮಾಡಿದ್ದಾನೆಂದು ಅಳಿಯ ಸೈಯದ್ ಉಮರ್ ವಿರುದ್ದ ದೂರು ನೀಡಿದ್ದಾರೆ.ಉದಯಗಿರಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ…