ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದ ತಂದೆ…ಮೈಸೂರಿನ ಉದ್ಭೂರಿನಲ್ಲಿ ಘಟನೆ…
- CrimeMysore
- November 18, 2022
- No Comment
- 122
ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದ ತಂದೆ…ಮೈಸೂರಿನ ಉದ್ಭೂರಿನಲ್ಲಿ ಘಟನೆ…
ಮೈಸೂರು,ನ18,Tv10 ಕನ್ನಡ
ಕುಡಿದ ಮತ್ತಿನಲ್ಲಿ ಸ್ವಂತ ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದ ತಂದೆ ಪರಾರಿಯಾದ ಘಟನೆ ಮೈಸೂರು ತಾಲೂಕು ಉದ್ಭೂರು ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ ಕುಸುಮ(13) ಹಾಗೂ ಧನಶ್ರೀ(9) ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ವಾಮಿನಾಯಕ(45)ಸ್ವಂತ ಮಕ್ಕಳ ಮೇಲೆ ಹಲ್ಲೆ ನಡೆಸಿದ ತಂದೆ.ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಸ್ವಾಮಿ ನಾಯಕ ಪತ್ನಿ ಗೀತಾ ಜೊತೆ ಜಗಳ ಆಡಿದ್ದಾನೆ.ಸಂಸಾರದ ಜವಾಬ್ದಾರಿ ಹೊರದ ಸ್ವಾಮಿನಾಯಕನಿಗೆ ಪತ್ನಿ ಗೀತಾ ಬುದ್ದಿವಾದ ಹೇಳಿದ್ದಾಳೆ.ಇದರಿಂದ ಸಂಯಮ ಕಳೆದುಕೊಂಡ ಸ್ವಾಮಿನಾಯಕ ಸುತ್ತಿಗೆಯಿಂದ ಮಕ್ಕಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ…