ನವೆಂಬರ್ 21 ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ…ಪ.ಮಲ್ಲೇಶ್ ಹೇಳಿಕೆಗೆ ಶಕ್ತಿ ಪ್ರದರ್ಶನಕ್ಕೆ ಮುಂದಾದ ವಿಪ್ರ ಸಮುದಾಯ…

ನವೆಂಬರ್ 21 ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ…ಪ.ಮಲ್ಲೇಶ್ ಹೇಳಿಕೆಗೆ ಶಕ್ತಿ ಪ್ರದರ್ಶನಕ್ಕೆ ಮುಂದಾದ ವಿಪ್ರ ಸಮುದಾಯ…

  • Mysore
  • November 19, 2022
  • No Comment
  • 127

ನವೆಂಬರ್ 21 ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ…ಪ.ಮಲ್ಲೇಶ್ ಹೇಳಿಕೆಗೆ ಶಕ್ತಿ ಪ್ರದರ್ಶನಕ್ಕೆ ಮುಂದಾದ ವಿಪ್ರ ಸಮುದಾಯ…

ಮೈಸೂರು,ನ19,Tv10 ಕನ್ನಡ
ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ನವೆಂಬರ್ 21 ಪ್ರತಿಭಟನಾ ಮೆರವಣಿಗೆ ನಡೆಸಲು ವಿಪ್ರ ಸಮಾಜ ತೀರ್ಮಾನಿಸಿದೆ.ಈ ಕುರಿತಂತೆ
ಮೂಡಾ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯವನ್ನು ವಿನಾಕಾರಣ ದೋಷಿಸುವ ಹಲವಾರು ಪ್ರಕರಣಗಳು ನಡೆಯುತ್ತಿದೆ.ಅದಕ್ಕೆ ಹೊಸದಾದ ಸೇರ್ಪಡೆ ಎಂದರೆ ಇತ್ತೀಚಿಗೆ ಪ.ಮಲ್ಲೇಶ್ ಎಂಬಾತ ಬ್ರಾಹ್ಮಣ ಜನಾಂಗದ ಕುರಿತು ಆಕ್ಷೇಪಣಾರ್ಹ ಹೇಳಿಕೆ ನೀಡಿರುವುದು ಎಂದು ರಾಜೀವ್ ಹೇಳಿದರು.ಬ್ರಾಹ್ಮಣ ಜನಾಂಗ ಇಂದು ಅಲ್ಪಸಂಖ್ಯಾತ ಸಮುದಾಯವಾಗಿದೆ, ನಮ್ಮ ರಾಜ್ಯದ ಮತ್ತು ದೇಶದ ಜನಸಂಖ್ಯೆಯಲ್ಲಿ ಶೇಕಡ ಮಾತ್ರ ಬ್ರಾಹ್ಮಣ ಜನಾಂಗವಿದೆ. ಸರ್ವೆ ಜನಾ: ಸುಖಿನೋ ಭವಂತು ಎಂಬುದು ಬ್ರಾಹ್ಮಣರ ಧ್ಯೇಯ ವ್ಯಾಖ್ಯದಂತೆ ಜೀವನ ನಡೆಸುತ್ತಿದ್ದಾರೆ.ಬ್ರಾಹ್ಮಣ ಸಮುದಾಯ ಎಂದಿಗೂ ಸಮಾಜ ಒಡೆಯುವ ಕೆಲಸ ಮಾಡಿಲ್ಲ, ಮಾಡುವುದು ಇಲ್ಲ, ಬ್ರಾಹ್ಮಣ ಸಮುದಾಯದ ಉದ್ದೇಶ ಸದೃಢ ಸಮಾಜದ ನಿರ್ಮಾಣವೇ ಆಗಿದೆ. ಬ್ರಾಹ್ಮಣ ಸಮುದಾಯ ಎಂದಿಗೂ ಇತರೆ ಜನಾಂಗದವರನ್ನು ದೂಷಣೆ ಮಾಡಿಲ್ಲ, ಹೀಗಿದ್ದರೂ ಆಗಾಗ್ಗೆ ನಮ್ಮ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗುತ್ತಿದ್ದು,
ಇದನ್ನು ಈವರೆವೆಗೆ ಬ್ರಾಹ್ಮಣ ಸಮುದಾಯ ಸಹಿಸಿಕೊಂಡು ಬಂದಿದೆ.ಇದರ ಹಿನ್ನೆಲೆ ಎಂದರೆ ನಾವು ಪ್ರತಿಕ್ರಿಯೆ ನೀಡಿ ಸಾಮಾಜಿಕ ಅಸಮೋತೋಲನ ಉಂಟುಮಾಡಬಾರದು ಎಂಬುದಾಗಿತ್ತು.ಆದರೆ ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯವನ್ನು ಹಿಯಾಳಿಸುತ್ತಿರುವುದನ್ನು ಇನ್ನು ಸಹಿಸಬಾರದು ಎಂದು ಎಚ್ಚರಿಕೆ ನೀಡಿದರು.
ಇದನ್ನು ಖಂಡಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ, ಇತ್ತೀಚಿಗೆ ಪ.ಮಲ್ಲೇಶ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಹಾಗೂ ಇನ್ನು ಮುಂದೆ ಯಾರು ಈ ರೀತಿಯ ಹೇಳಿಕೆ ನೀಡಬಾರದು ಎಂದು ಆಗ್ರಹಿಸಿ, ಇದೇ ನವಂಬರ್ ಸೋಮವಾರ 21 ರಂದು ಬ್ರಾಹ್ಮಣ ಸಮುದಾಯವು ಪ್ರತಿಭಟನಾ ಮೆರೆವಣಿಗೆ ಹಮ್ಮಿಕೊಂಡಿದೆ ಎಂದರು.ಅಂದು ಬೆಳಗ್ಗೆ 10:30 ಗಂಟೆಗೆ ಮೈಸೂರಿನ ಶಂಕರ ಮಠದ ವಿದ್ಯಾಶಂಕರ ಕಲ್ಯಾಣ ಮಂಟಪ (ಗನ್ ಹೌಸ್) ಮುಂಭಾಗದಿಂದ ಆರಂಭಗೊಳ್ಳುವ ಪ್ರತಿಭಟನಾ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಈ ರೀತಿ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಮುಂದಿನ ದಿನದಲ್ಲಿ ಇಂತಹ ಘಟನೆ ನಡೆಯದಂತೆ ಶಾಸನ ಮಾಡುವಂತೆ ಆಗ್ರಹಿಸಲಾಗುವುದು.
ಬ್ರಾಹ್ಮಣ ಸಮುದಾಯ ಅಶಕ್ತರಲ್ಲ, ತಮ್ಮ ಮೇಲಾಗುವ ಆಕ್ರಮಣವನ್ನು ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ಪ್ರತಿಭಟಿಸಿ ನಮ್ಮ ಶಕ್ತಿಯನ್ನು ಪ್ರದೇಶಿಸಲಾಗುವುದು ಎಂದು ಕೋರುತ್ತೇವೆ ಎಂದು ಮನವಿ ಮಾಡಿದ ರಾಜೀವ್,
ಇದಕ್ಕೆ ಸಮಸ್ತ ಹಿಂದೂ ಸಮಾಜ ಸ್ಪಂದಿಸಿ ನಮ್ಮ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ
ಮೂಡಾ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಆದರ್ಶ ಸೇವಾ ಸಂಘದ ಅಧ್ಯಕ್ಷರಾದ ಜಿ ಆರ್ ನಾಗರಾಜ್, ನಗರಪಾಲಿಕಾ ಸದಸ್ಯರಾದ ಮಾ. ವಿ ರಾಮಪ್ರಸಾದ್, ವಿಪ್ರಪರಸ್ಪರ ಸಹಾಯ ಸಮಿತಿಯ ಸುಂದರೇಶನ್, ವಿಪ್ರ ಮಹಿಳಾ ಸಂಗಮ ಅಧ್ಯಕ್ಷರಾದ ಡಾ. ಲಕ್ಷ್ಮಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಉಪಸ್ಥಿತರಿದ್ದರು…

Spread the love

Related post

ಚಾಕುವಿನಿಂದ ಇರಿದು ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ…ಆರೋಪಿಗಳಿಗಾಗಿ ಶೋಧ…

ಚಾಕುವಿನಿಂದ ಇರಿದು ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ…ಆರೋಪಿಗಳಿಗಾಗಿ ಶೋಧ…

ಮೈಸೂರು,ಡಿ23,Tv10 ಕನ್ನಡ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆಮೈಸೂರು ಹೊರವಲಯದ ಬೆಲವತ್ತ ಗ್ರಾಮದಲ್ಲಿ ನಡೆದಿದೆ.ಹನುಮಂತು (57) ಕೊಲೆಯಾದ ವ್ಯಕ್ತಿ.ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದ್ವೇಷ ಹಿನ್ನೆಲೆ…
ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕನ ಅನುಚಿತ ವರ್ತನೆ…ಮಹಿಳೆಯ ವಿಡಿಯೋ ಚಿತ್ರೀಕರಣ ಆರೋಪ…ಡಿಪೋ ಮ್ಯಾನೇಜರ್ ಗೆ ದೂರು…

ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕನ ಅನುಚಿತ ವರ್ತನೆ…ಮಹಿಳೆಯ ವಿಡಿಯೋ ಚಿತ್ರೀಕರಣ ಆರೋಪ…ಡಿಪೋ…

ನಂಜನಗೂಡು,ಡಿ21,Tv10 ಕನ್ನಡ ಮಹಿಳಾ ಪ್ರಯಾಣಿಕರೊಂದಿಗೆ ಕೆಎಸ್ ಆರ್ ಟಿಸಿ ಬಸಿ ನಿರ್ವಾಹಕನ ವಿರುದ್ದ ಸಂಘಟಕರು ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.ನಂಜನಗೂಡಿನಿಂದ ಚಿಕ್ಕಬರಗಿ ಗ್ರಾಮಕ್ಕೆ ತೆರಳುವ ಬಸ್ ಸಂಖ್ಯೆ…
ಸರೋಜಿನಿ ಮಹಿಷಿ ವರದಿ ಶೀಘ್ರ ಅನುಷ್ಠಾನವಾಗಲಿ…87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಆಗ್ರಹ…

ಸರೋಜಿನಿ ಮಹಿಷಿ ವರದಿ ಶೀಘ್ರ ಅನುಷ್ಠಾನವಾಗಲಿ…87ನೇ ಅಖಿಲ ಭಾರತ ಕನ್ನಡ ಸಾಹಿತ್ಯ…

ಮಂಡ್ಯ,ಡಿ20,Tv10 ಕನ್ನಡ ಸಕ್ಕರೆ ನಾಡಿನಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೊಳಗಿದೆ.ಎಲ್ಲೆಲ್ಲೂ ಕನ್ನಡ ಕಂಪು ಪಸರಿಸುತ್ತಿದೆ.ಸಾಹಿತ್ಯ ಸಮ್ಮೇಳನವನ್ನ ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷರಾದ ಗೊ.ರೂ.ಚೆನ್ನಬಸ್ಸಪ್ಪ ಕನ್ನಡ…

Leave a Reply

Your email address will not be published. Required fields are marked *