ಕುವೆಂಪುನಗರ ಪೊಲೀಸರ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…11.75 ಲಕ್ಷ ಮೌಲ್ಯದ ಚಿನ್ನಾಭರಣ ವಶ…
- CrimeMysore
- November 19, 2022
- No Comment
- 127
ಕುವೆಂಪುನಗರ ಪೊಲೀಸರ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…11.75 ಲಕ್ಷ ಮೌಲ್ಯದ ಚಿನ್ನಾಭರಣ ವಶ…
ಮೈಸೂರು,ನ19,Tv10 ಕನ್ನಡ
ಮೋಜು ಮಸ್ತಿಗಾಗಿ ಸರಗಳ್ಳತನಕ್ಕೆ ಇಳಿದ ಇಬ್ಬರು ಚೋರರು ಕುವೆಂಪುನಗರ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.ಕುವೆಂಪುನಗರ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದಾರೆ.ಬಂಧಿತ ಆರೋಪಿಗಳಿಂದ 11.75. ಲಕ್ಷ ಮೌಲ್ಯದ 235 ಗ್ರಾಂ ತೂಕದ 5 ಚಿನ್ನದ ಸರಗಳನ್ನ ವಶಪಡಿಸಿಕೊಳ್ಳಲಾಗಿದೆ.ಮೈಸೂರಿನ ಯುವಕರಾದ ಸಂತೋಷ್(23) ಹಾಗೂ ದರ್ಶನ್(20) ಬಂಧಿತ ಸರಗಳ್ಳರು.ಬಂಧಿತರಿಂದ 3 ಲಕ್ಷ ಮೌಲ್ಯದ ಮೂರು ಬೈಕ್ ಗಳು ಹಾಗೂ 1 ಲಕ್ಷ ಮೌಲ್ಯದ 2 ಮೊಬೈಲ್ ಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ.
ಫಾರ್ಮೆಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಮೋಜುಮಸ್ತಿಗಾಗಿ ಸಾಕಷ್ಟು ಸಾಲ ಮಾಡಿದ್ದರು.ಸಾಲ ತೀರಿಸಲು ಅಡ್ಡದಾರಿ ಹಿಡಿದ ಯುವಕರು ಸರಗಳ್ಳತನಕ್ಕೆ ಇಳಿದಿದ್ದರು.ಅಕ್ಟೋಬರ್ ನಲ್ಲಿ ನಡೆದ ಸರಗಳುವು ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಷಣ್ಮುಗವರ್ಮ ಅಂಡ್ ಟೀಂ ಇಬ್ಬರು ಖದೀಮರನ್ನ ಸೆದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಕುವೆಂಪುನಗರ ಠಾಣೆಯ ನಾಲ್ಕು ಹಾಗೂ ಕೆ.ಆರ್.ಪೊಲೀಸ್ ಠಾಣೆಯ 1 ಸರಗಳುವು ಪ್ರಕರಣ ಪತ್ತೆಯಾಗಿದೆ.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ.ಎಂ.ಎಸ್ ರವರ ಮಾರ್ಗದರ್ಶನದಲ್ಲಿ ಕೆ.ಆರ್.ಉಪವಿಭಾಗದ ಎಸಿಪಿ ಗಂಗಾಧರಸ್ವಾಮಿ ಉಸ್ತುವಾರಿಯಲ್ಲಿ,ಕುವೆಂಪುನಗರ ಠಾಣೆಯ ಇನ್ಸ್ಪೆಕ್ಟರ್ ಷಣ್ಮುಗವರ್ಮ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಕು.ರಾಧ,ಗೋಪಾಲ್,ಎಎಸ್ಸೈ ಮಹದೇವ ಹಾಗೂ ಸಿಬ್ಬಂದಿಗಳಾದ ಮಂಜುನಾಥ್,ಪುಟ್ಟಪ್ಪ,ನಾಗೇಶ್,ಯೋಗೇಶ್,ಮನುಕುಮಾರ್,ಶ್ರೀನಿವಾಸ್,ಮಾದೇಶ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ
ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಡಿಸಿಪಿ ಪ್ರದೀಪ್ ಘಂಟಿ ಪ್ರಶಂಸಿಸಿದ್ದಾರೆ…