ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದು ಪತ್ನಿಯನ್ನ ಇರಿದು ನಾಪತ್ತೆಯಾಗಿದ್ದ ಪತಿ ಅಂದರ್…ಆರೋಪಿ ನ್ಯಾಯಾಂಗ ಬಂಧನಕ್ಕೆ…
- CrimeMysore
- November 19, 2022
- No Comment
- 169
ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದು ಪತ್ನಿಯನ್ನ ಇರಿದು ನಾಪತ್ತೆಯಾಗಿದ್ದ ಪತಿ ಅಂದರ್…ಆರೋಪಿ ನ್ಯಾಯಾಂಗ ಬಂಧನಕ್ಕೆ…
ಮೈಸೂರು,ನ19,Tv10 ಕನ್ನಡ
ಕುಡಿದ ಮತ್ತಿನಲ್ಲಿ ಇಬ್ಬರು ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದು ಪತ್ನಿಗೆ ಚೂರಿಯಿಂದ ಇರಿದು ನಾಪತ್ತೆಯಾಗಿದ್ದ ಪತಿರಾಯ ಅಂದರ್ ಆಗಿದ್ದಾನೆ.ಸ್ವಾಮಿ ನಾಯಕ ಬಂಧಿತ ಆರೋಪಿ.ತರಕಾರಿ ವ್ಯಾಪಾರ ಮಾಡುತ್ತಾ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಹಣ ತೊಡಗಿಸಿ ನಷ್ಟ ಅನುಭವಿಸಿದ್ದ ಸ್ವಾಮಿ ನಾಯಕ ಕುಡಿತದ ಚಟಕ್ಕೆ ದಾಸನಾಗಿದ್ದ.ಕುಡಿದ ಅಮಲಿನಲ್ಲಿ ಮನೆಗೆ ಬಂದ ಸ್ವಾಮಿ ನಾಯಕ ತನ್ನ ಇಬ್ಬರು ಮಕ್ಕಳಾದ ಕುಸುಮ ಹಾಗೂ ಧನಶ್ರೀ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ.ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದ ಪತ್ನಿ ಗೀತಾ ಮನೆಗೆ ಹಿಂದಿರುಗಿದಾಗ ಚಾಕುವಿನಿಂದ ಇರಿದು ಪರಾರಿಯಾಗಿದ್ದ.ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು ಆರೋಪಿ ಸ್ವಾಮಿನಾಯಕನ ಬಂಧನಕ್ಕೆ ಜಾಲ ಬೀಸಿದ್ದರು.ಇಂದು ಆರೋಪಿ ಸೆರೆಯಾಗಿದ್ದಾನೆ.ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ…