ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ…ಮೈಸೂರುನಲ್ಲಿ ಶಂಕಿತನ ಹೆಜ್ಜೆ ಗುರುತು…
- CrimeMysore
- November 20, 2022
- No Comment
- 143
ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ…ಮೈಸೂರುನಲ್ಲಿ ಶಂಕಿತನ ಹೆಜ್ಜೆ ಗುರುತು…
ಮೈಸೂರು,ನ20,Tv10 ಕನ್ನಡ
ಮಂಗಳೂರಿನಲ್ಲಿ ಆಟೋ ಬ್ಲಾಸ್ಟ್ ಪ್ರಕರಣಕ್ಕೆ ಸಂಭಂಧಿಸಿದಂತೆ
ಶಂಕಿತನ ಹೆಜ್ಜೆ ಗುರುತು ಮೈಸೂರಿನಲ್ಲಿ ಪತ್ತೆ ಹಚ್ಚಿದ್ದಾರೆ.ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕೊಠಡಿ ಬಾಡಿಗೆ ಪಡೆದಿರುವುದು ಬೆಳಕಿಗೆ ಬಂದಿದೆ.
ಸಿಂಗಲ್ ರೂಂ ಒಂದನ್ನ ಬಾಡಿಗೆ ಪಡೆದಿದ್ದ.
ಮೋಹನ್ ಕುಮಾರ್ ಎಂಬುವವರ ಮನೆಯಲ್ಲಿ ರೂಂ ಪಡದಿದ್ದ. ಲೋಕನಾಯಕ ನಗರದ ೧೦ನೇ ಕ್ರಾಸ್‌ನಲ್ಲಿ ರೂಂ ಪಡೆದಿದ್ದ.
ಅಗ್ರಿಮೆಂಟ್ ಕಾಪಿಯಲ್ಲಿ ಪ್ರೇಮ್ ರಾಜ್ ಎಂದು ಉಲ್ಲೇಖಿಸಿದ್ದ.
ಹುಬ್ಬಳ್ಳಿ ವಿಳಾಸ ನೀಡಿ ಅಗ್ರಿಮೆಂಟ್ ಮಾಡಿಕೊಂಡಿದ್ದ.
ನಕಲಿ ವಿಳಾಸ ನೀಡಿ ಅಗ್ರಿಮೆಂಟ್ ಮಾಡಿಕೊಂಡಿದ್ದ.
ಪೊಲೀಸರು ಕೊಠಡಿ ಪರೀಕ್ಷೆ ಮಾಡಿದಾಗ ಕೆಲವು ಸ್ಪೋಟಕ ವಸ್ತುಗಳು ಪತ್ತೆಯಾಗಿದೆ.
ಸರ್ಕ್ಯೂಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮೊಬೈಲ್, ವುಡೆನ್ ಪೌಡರ್, ಅಲುಮಿನಿಯಂ, ಮಲ್ಟಿ ಮೀಟರ್, ವೈರ‍್ಸ್, ಮಿಕ್ಸರ್ ಜಾರ‍್ಸ್, ಪ್ರೆಶರ್ ಕುಕ್ಕರ್ ಸೇರಿದಂತೆ ಹಲವು ಸ್ಪೋಟಕ ಗಳು ಪತ್ತೆಯಾಗಿದೆ.
ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್,
ಒಂದು ಫಿನೋ ಡೆಬಿಟ್ ಕಾರ್ಡ್ ಪತ್ತೆಯಾಗಿದೆ.ಅಗ್ರಹಾರದ ಅಂಗಡಿಯಲ್ಲಿ ಮೊಬೈಲ್ ರಿಪೇರಿ ಟ್ರೈನಿಂಗ್ ಪಡೆದಿದ್ದ ಎನ್ನಲಾಗಿದೆ.ಶಂಕಿತ ನೆಲೆಸಿದ್ದ ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ…