
ಕಬ್ಬಿನ ಎಫ್.ಆರ್.ಪಿ.ಹೆಚ್ಚುವರಿ ದರ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ…3 ನೇ ದಿನ ಉರುಳು ಸೇವೆ ಮಾಡಿ ಆಕ್ರೋಷ…
- TV10 Kannada Exclusive
- November 24, 2022
- No Comment
- 181

ಕಬ್ಬಿನ ಎಫ್.ಆರ್.ಪಿ.ಹೆಚ್ಚುವರಿ ದರ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ…3 ನೇ ದಿನ ಉರುಳು ಸೇವೆ ಮಾಡಿ ಆಕ್ರೋಷ…

ಬೆಂಗಳೂರು,ನ25,Tv10 ಕನ್ನಡ
ಕಬ್ಬಿನ ಎಫ್ ಆರ್ ಪಿ ಹೆಚ್ಚುವರಿ ದರ ನಿಗದಿ ಒತ್ತಾಯಿಸಿ *ಕಬ್ಬು ಬೆಳೆಗಾರ ರೈತರು ಬೆಂಗಳೂರಿನ ಪ್ರಿಡಂ ಪಾರ್ಕನಲಿ,3ನೇ ದಿನವಾದ ಇಂದು ಉರುಳು ಸೇವೆ ಮೂಲಕ ಪ್ರತಿಭಟಿಸಿದರು.ಫ್ರೀಡಂ ಪಾರ್ಕ್ ನಿಂದ ವಿದಾನ ಸೌದಧ ಕಡೆಗೆ ಉರುಳುತ್ತಾ ಹೋಗುತ್ತಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ ಮನ ಒಲಿಸುವಲ್ಲಿ ಯಶಸ್ವಿಯಾದರು.
ಕಬ್ಬು ಎಫ್ ಆರ್ ಪಿ ಹೆಚ್ಚುವರಿ ದರ ನಿಗದಿ ರಾಜ್ಯ ಸರ್ಕಾರದ ಭರವಸೆ ಹುಸಿಯಾದ ಕಾರಣ ರೈತರಿಗೆ ನ್ಯಾಯ ಸಿಗುವ ತನಕ ಚಳುವಳಿ ನಡೆಸುವುದಾಗಿ ರೈತರು ಸರ್ಕಾರದ ವರ್ತನೆಯನ್ನು ಖಂಡಿಸಿ 3ನೇ ದಿನ ಉರುಳುಸೇವೆ ಮೂಲಕ ವಿಧಾನ ಸೌಧದ ಕಡೆ ಹೂರಟರು. ಈ ವೇಳೆ ಚಳುವಳಿಯನ್ನ ತಡೆದರು. ಎಫ್.ಆರ್.ಪಿ.ದರ ಸೇರಿದಂತೆ ಇನ್ನಿತರ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿದರು. ಇಂದಿನ ಚಳುವಳಿಯಲ್ಲಿ, ರಾಜ್ಯ ಉಪಾಧ್ಯಕ್ಷ ಸುರೇಶ್ ಮಲ್ಲನಗೌಡ ಪಾಟೀಲ್, ಕುಮಾರ ಭೂಬಾಟಿ, ಉಳುವಪ್ಪ ಬೆಳಗೇರಿ,ಬಸವನಗೌಡರುಗುಲ್ಬರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಉಗಾರ್, ಬಸವರಾಜ್ ಪಾಟೀಲ್,
ಎಂ ವಿ ಗಾಡಿ, ಅತ್ತಹಳ್ಳಿದೇವರಾಜ್,
ಬರಡನಪುರ
ನಾಗರಾಜು ಭಾಗವಹಿಸಿದ್ದರು…