• November 24, 2022

ಸಿಸಿಬಿ ಪೊಲೀಸರ ಕಾರ್ಯಾಚರಣೆ…ನಾಲ್ವರು ಕಳ್ಳರ ಬಂಧನ…20.40 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸಿಸಿಬಿ ಪೊಲೀಸರ ಕಾರ್ಯಾಚರಣೆ…ನಾಲ್ವರು ಕಳ್ಳರ ಬಂಧನ…20.40 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸಿಸಿಬಿ ಪೊಲೀಸರ ಕಾರ್ಯಾಚರಣೆ…ನಾಲ್ವರು ಕಳ್ಳರ ಬಂಧನ…20.40 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮೈಸೂರು,ನ25,Tv10 ಕನ್ನಡ
ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ತಾಚರಣೆಯಲ್ಲಿ ಪ್ರತ್ಯೇಕ ಪ್ರಕರಣಕ್ಕೆ ಸಂಭಂಧಿಸಿದಂತೆ ನಾಲ್ವರು ಕಳ್ಳರು ಸೆರೆ ಸಿಕ್ಕಿದ್ದಾರೆ.ಬಂಧಿತರಿಂದ 20 ಲಕ್ಷ 40 ಸಾವಿರ ಮೌಲ್ಯದ 380 ಗ್ರಾಂ ಚಿನ್ನಾಭರಣ,808 ಗ್ರಾಂ ಬೆಳ್ಳಿ,3 ಕೈಗಡಿಯಾರ,ಒಂದು ಕಾರು,ಒಂದು ಕ್ಯಾಮರಾ ವಶಪಡಿಸಿಕೊಂಡಿದ್ದಾರೆ.

ಮೊದಲನೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದ್ದು 16.50 ಲಕ್ಷ ಮೌಲ್ಯದ 312 ಗ್ರಾಂ ಚಿನ್ನಾಭರಣ ಹಾಗೂ 808 ಗ್ರಾಂ ಬೆಳ್ಳಿ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವು ಮಾಡಿರುವುದು ಪತ್ತೆಯಾಗಿದೆ

ಎರಡನೇ ಪ್ರಕರಣದಲ್ಲಿ ಓರ್ವ ಅರೋಪಿ ಸೆರೆಯಾಗಿದ್ದು ಬಂಧಿತನಿಂದ 1.50 ಲಕ್ಷ ಮೌಲ್ಯದ ಚಿನ್ನಾಭರಣ,ಮೂರು ಕೈಗಡಿಯಾರ,ಒಂದು ಕ್ಯಾಮರಾ ವಶಪಡಿಸಿಕೊಂಡಿದ್ದಾರೆ.ಈತ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯವೆಸಗಿ ಸಿಕ್ಕಿಬಿದ್ದಿದ್ದಾನೆ.

ಮೂರನೇ ಪ್ರಕರಣದಲ್ಲಿ ಓರ್ವ ಆರೋಪಿ ಸಿಕ್ಕಿಬಿದ್ದಿದ್ದು ಈತನಿಂದ 2.40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಕಾರ್ ವಶಪಡಿಸಿಕೊಳ್ಳಲಾಗಿದೆ.ಸದರಿ ಆರೋಪಿ ಜಯಲಕ್ಷ್ಮಿಪುರಂ ಹಾಗೂ ಹಾಸನ ಜಿಲ್ಲೆ ಪೊಲೀಸ್ ಠಾಣಾ ವ್ಯಾಪ್ತಿಯ ಕಳುವು ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್.ಗೀತಾ ರವರ ಮಾರ್ಗದರ್ಶನದಲ್ಲಿ ಹಾಗೂ ಸಿಸಿಬಿ ಎಸಿಪಿ ಸಿ.ಕೆ.ಅಶ್ವತ್ಥನಾರಾಯಣ್ ಉಸ್ತುವಾರಿಯಲ್ಲಿ ಸಿಸಿಬಿ ನಿರೀಕ್ಷಕರಾದ ಶೇಖರ್,ಎಎಸ್ಸೈ ಗಳಾದ ಉಮೇಶ್,ಅಸ್ಗರ್ ಖಾನ್ ಸಿಬ್ಬಂದಿಗಳಾದ ಸಲೀಂ ಪಾಷ,ರಾಮಸ್ವಾಮಿ,ಗಣೇಶ್,ಶಿವರಾಜು ಸೇರಿದಂತೆ ಇತರರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.

ಪತ್ತೆ ಕಾರ್ಯವನ್ನ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ರವರು ಪ್ರಶಂಸಿಸಿದ್ದಾರೆ…

Spread the love

Leave a Reply

Your email address will not be published.