ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಬ್ರಾಹ್ಮಣ ಸಮುದಾಯದ ಆಕ್ರೋಷ…ಮೀಸಲಾತಿ ಬಗ್ಗೆ ಮಾತನಾಡಿದ ಶಾಸಕನ ವಿರುದ್ದ ಪ್ರತಿಭಟನೆ…
- Mysore
- December 3, 2022
- No Comment
- 155
ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಬ್ರಾಹ್ಮಣ ಸಮುದಾಯದ ಆಕ್ರೋಷ…ಮೀಸಲಾತಿ ಬಗ್ಗೆ ಮಾತನಾಡಿದ ಶಾಸಕನ ವಿರುದ್ದ ಪ್ರತಿಭಟನೆ…
ಮೈಸೂರು,ಡಿ3,Tv10 ಕನ್ನಡ
ಬ್ರಾಹ್ಮಣ ಜನಾಂಗದ ವಿರುದ್ಧವಾಗಿ ದೆಹಲಿಯ ಜೆ.ಎನ್.ಯು ವಿಶ್ವವಿದ್ಯಾನಿಲಯದ ಗೋಡೆಗಳ ಮೇಲೆ ಅವಹೇಳನಕಾರಿಯಾಗಿ ಬರೆದ ಕಿಡಿಗೇಡಿಗಳನ್ನ ಬಂಧಿಸಿ ಕಠಿಣಕ್ರಮ ಕೈಗೊಳ್ಳುವಂತೆ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದ 144 ಮೇಲ್ಜಾತಿಯ ಪಂಗಡಗಳಿಗೆ 10% ಮೀಸಲಾತಿ ಸುಪ್ರಿಂ ಕೋರ್ಟ್ ತೀರ್ಪನ್ನ ಸಾರ್ವಜನಿಕವಾಗಿ ಮಾತನಾಡುವಾಗ ಬ್ರಾಹ್ಮಣರಿಗೆ 10% ಮೀಸಲಾತಿ ತಲುಪತ್ತದೆ ಎಂದು ತಪ್ಪಾಗಿ ಮಾಹಿತಿ ನೀಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಬ್ರಾಹ್ಮಣ ಸಮುದಾಯ ಇಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿತು.ಇಂತಹವರ ವಿರುದ್ದ ಸೂಕ್ತಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ಹಾಗೂ ಮೈಸೂರು ಬ್ರಾಹ್ಮಣ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು.
ಬ್ರಾಹ್ಮಣ ಜನಾಂಗದ ಮೇಲೆ ಕೆಲವು ಕಿಡಿಗೇಡಿಗಳು ಪದೇಪದೇ ಅವಹೇಳನ ಮಾಡಿ ಸಮಾಜದಲ್ಲಿ ಶಾಂತಿ ಕೆದಡುವ ವಾತವರಣಕ್ಕೆ ಮುಂದಾಗುತ್ತಿದ್ದು ಇವರ ಮೇಲೆ ಸರ್ಕಾರ ಸೂಕ್ತ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು. ಈಹಿಂದೆ ಪಾ.ಮಲ್ಲೇಶ್ ನಂತರ ಇದೀಗ ವರುಣಾ ವಿಧಾನಸಭಾ ಶಾಸಕ ಯತೀಂದ್ರ ಸಿದ್ಧರಾಮಯ್ಯ ಸರದಿಯಾಗಿದೆ. ಬ್ರಾಹ್ಮಣ ಜನಾಂಗ ಶೇಕಡ 3% ಮಂದಿಯಿದ್ದು ಅವರಿಗೆ 10% ಮೀಸಲಾತಿ ಕಲ್ಪಿಸಲಾಗಿದೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ತಪ್ಪಾಗಿ ಹೇಳಿ ಜಾತಿಜಾತಿಗಳ ವಿರುದ್ಧ ಜಗಳ ಬಿತ್ತುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ, ಪರಮಪೂಜ್ಯ ಇಳೈಆಳ್ವಾರ್ ಸ್ವಾಮೀಜಿ, ಲೇಖಕರು ಹಾಗೂ ನಿವೃತ್ತಿ ತಾಸಿಲ್ದಾರರದ ರಂಗನಾಥ್, ಮಾಜಿನಗರ ಪಾಲಿಕೆ ಸದಸ್ಯರಾದ ಸೌಭಾಗ್ಯ ಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಮುಳ್ಳೂರು ಗುರುಪ್ರಸಾದ್, ಕಡಕೋಳ ಜಗದೀಶ್,
ಜಯಸಿಂಹಾ ಶ್ರೀಧರ್, ರಂಗನಾಥ್, ವಿಕಾಸ್ ಶಾಸ್ತ್ರಿ, ವಿಪ್ರ ಪ್ರೊಫೆಷನಲ್ ಸುಧೀಂದ್ರ, ಓಂ ಶ್ರೀನಿವಾಸ್, ಅಪೂರ್ವ ಸುರೇಶ್ ,ಮಿರ್ಲೆ ಪನೀಶ್, ವಾಸುದೇವ್ ಮೂರ್ತಿ, ಮಂಜುನಾಥ್, ಸುಚೇಂದ್ರ, ಪ್ರಶಾಂತ್,ವಿಘ್ನೇಶ್ವರ ಭಟ್, ಸುದರ್ಶನ್, ಶ್ರೀನಿವಾಸ್,
ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು…