ಸಮರ್ಪಣಾ ಭಾವನೆಯಿಂದ ಪರಮಾತ್ಮನನ್ನು ಪ್ರಾರ್ಥಿಸಿ…ದತ್ತಜಯಂತಿ ಮಹೋತ್ಸವದಲ್ಲಿ ಗಣಪತಿ ಶ್ರೀಗಳ ಕರೆ…
- Temples
- December 7, 2022
- No Comment
- 155
ಸಮರ್ಪಣಾ ಭಾವನೆಯಿಂದ ಪರಮಾತ್ಮನನ್ನು ಪ್ರಾರ್ಥಿಸಿ…ದತ್ತಜಯಂತಿ ಮಹೋತ್ಸವದಲ್ಲಿ ಗಣಪತಿ ಶ್ರೀಗಳ ಕರೆ…
ಮೈಸೂರು,ಡಿ7,Tv10 ಕನ್ನಡ ನನ್ನದೆಂಬುದು ಏನೂ ಇಲ್ಲ, ಎಲ್ಲವೂ ನಿನ್ನದೆ ಎಂಬ ಸಮರ್ಪಣಾ ಭಾವನೆಯಿಂದ ಆ ಪರಮಾತ್ಮನ್ನು ಪ್ರಾರ್ಥಿಸಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು.ಅವಧೂತ ದತ್ತಪೀಠದಲ್ಲಿ ನಡೆಯುತ್ತಿರುವ ದತ್ತ ಜಯಂತಿಯ ಕಾರ್ಯಕ್ರಮದ ವೇಳೆ ಇಂದು ಭಕ್ತರಿಗೆ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.
ಪರಮಾತ್ಮ ಭೂತ, ಭವಿಷ್ಯತ್ ಹಾಗೂ ವರ್ತಮಾನದಲ್ಲೂ ಇರುತ್ತಾರೆ.ಸೃಷ್ಟಿಯನ್ನು ಸೃಷ್ಟಿಸುವವನೂ ಆತನೇ,ಅದನ್ನು ನಾಶ ಮಾಡುವವನೂ ಅವನೇ ಎಂಬುದನ್ನ ನಾವೆಲ್ಲಾ ಅರಿಯಬೇಕು ಎಂದು ತಿಳಿಸಿದರು.ಯಾರಾದರೂ ತನಗೆಲ್ಲವೂ ಗೊತ್ತು ಎಂದು ಹೇಳಿದರೆ ಅದು ಖಂಡಿತಾ ನಾಟಕವಾಗುತ್ತದೆ,ಎಲ್ಲವೂ ಪರಮಾತ್ಮನೇ ಮಾಡಿಸುವನು ನಮ್ಮದು ಏನೇನೂ ಇಲ್ಲ.ನಾವು ಏನನ್ನಾದರೂ ಕಳೆದುಕೊಂಡೆವು ಎಂದು ಹೇಳುವುದು ಸರಿಯಲ್ಲ.ಎಲ್ಲವನ್ನೂ ಕೊಡುವವನು ಪರಮಾತ್ಮ, ಹಾಗಾಗಿ ಅವನಿಗೇ ಎಲ್ಲವನ್ನೂ ಸಮರ್ಪಣೆ ಮಾಡಿದ್ದೇವೆ ಎಂದು ಕೊಳ್ಳಬೇಕು ಎಂದು ತಿಳಿಸಿಕೊಟ್ಟರು.ನಾವು ತ್ಯಾಗ ಮನೋಭಾವ ಹಾಗೂ ಬೇರೆಯವರಿಗೆ ಸಹಾಯಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಉಪದೇಶ ಮಾಡಿದರು.ಪೂಜೆ ಮಾಡುವುದರಿಂದ ನಮ್ಮ ಎಷ್ಟೋ ಕರ್ಮಗಳು ಕಳೆಯುತ್ತವೆ.
ನಮಗೆ ಸಿಕ್ಕ ಲಾಭದಲ್ಲಿ ನಾವು ಸ್ವಲ್ಪವಾದರೂ ದಾನ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಶ್ರೀ ದತ್ತಾತ್ರೇಯ ಸ್ವಾಮಿ ಜಯಂತಿ ಪ್ರಯುಕ್ತ ಇಂದು ಅವಧೂತ ದತ್ತಪೀಠದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ದತ್ತ ಜಯಂತಿಯ ದಿನವಾದ ಇಂದು ಬೆಳಿಗ್ಗೆ ಶ್ರೀ ಚಕ್ರ ಪೂಜಾ ದತ್ತಾತ್ರೇಯ ಹೋಮ, ದತ್ತಾತ್ರೇಯ ಸ್ವಾಮಿಗೆ ಕ್ಷೀರಾಭಿಷೇಕ ನೆರವೇರಿಸಲಾಯಿತು.
ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ದತ್ತಾತ್ರೇಯ ಸ್ವಾಮಿಗೆ ಕ್ಷೀರಾಭಿಷೇಕ ಮಾಡಿದರು.
ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಆಗಮಿಸಿ ಪೂಜಾಕಾರ್ಯ ನೆರವೇರಿಸಿದರು.
ಅನಘ ವ್ರತ ಕೂಡಾ ಇದೇ ವೇಳೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವಿದೇಶಿ ಭಕ್ತರು ಸೇರಿದಂತೆ ಬಹಳಷ್ಟು ಭಕ್ತರು ಮಾತನಾಡಿ ಶ್ರೀ ಗಣಪತಿ ಸ್ವಾಮೀಜಿಯವರಲ್ಲಿ ತಾವು ದೇವರನ್ನು ಕಾಣುತ್ತೇವೆ ಎಂದು ತಿಳಿಸಿದರು.ಸಂಜೆ ದತ್ತಾತ್ರೇಯ ಸ್ವಾಮಿ ರಥೋತ್ಸವ ನೆರವೇರಿಸಲಾಯಿತು.
ಸಂಜೆ ನಾದಮಂಟಪದಲ್ಲಿ ಶ್ರೀ ಸ್ವಾಮೀಜಿಯವರು ದತ್ತಾತ್ರೇಯ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು…