
ನಿಯಂತ್ರಣ ತಪ್ಪಿ ಉರುಳಿದ ಬೈಕ್…ಸವಾರ ಸಾವು…ಹಿಂಬದಿ ಸವಾರನಿಗೆ ಗಾಯ…
- CrimeMysore
- December 12, 2022
- No Comment
- 91

ನಿಯಂತ್ರಣ ತಪ್ಪಿ ಉರುಳಿದ ಬೈಕ್…ಸವಾರ ಸಾವು…ಹಿಂಬದಿ ಸವಾರನಿಗೆ ಗಾಯ…
ಮೈಸೂರು,ಡಿ12,Tv10 ಕನ್ನಡ
ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದ ಪರಿಣಾಮ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡ ಘಟನೆ ಮೈಸೂರಿನ ಬನ್ನಿಮಂಟಪದ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಕೈಲಾಸಪುರಂ ನಿವಾಸಿ ಸೋಮು(50) ಮೃತ ದುರ್ದೈವಿ.ಹಿಂಬದಿ ಸವಾರ ನಾಗರಾಜ್ ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದಿದ್ದರೆ.ಹೆಲ್ಮೆಟ್ ಧರಿಸದ ಸೋಮುಗೆ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ.ಎನ್.ಆರ್.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…