
ದನಗಾಹಿ ಮೇಲೆ ಹುಲಿ ದಾಳಿ…ಗಾಯಾಳು ಮೈಸೂರಿನ ಆಸ್ಪತ್ರೆಗೆ ದಾಖಲು…
- CrimeMysore
- December 12, 2022
- No Comment
- 237

ದನಗಾಹಿ ಮೇಲೆ ಹುಲಿ ದಾಳಿ…ಗಾಯಾಳು ಮೈಸೂರಿನ ಆಸ್ಪತ್ರೆಗೆ ದಾಖಲು…
ನಂಜನಗೂಡು,ಡಿ12,Tv10 ಕನ್ನಡ
ದನಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿದ ಘಟನೆ ನಂಜನಗೂಡು ತಾಲೂಕು ಬಳ್ಳೂರುಹುಂಡಿ ಗ್ರಾಮದಲ್ಲಿ ನಡೆದಿದೆ.ದಾಸಯ್ಯ ಎಂಬುವರ ಮೇಲೆ ದಾಳಿ ನಡೆಸಿದೆ.ಈ ವೇಳೆ ಹತ್ತಿರದಲ್ಲಿದ್ದ ಇತರರು ನೆರವಿಗೆ ಬಂದು ದಾಸಯ್ಯನನ್ನ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.ಗಾಯಗೊಂಡ ದಾಸಯ್ಯನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ…