- December 22, 2022
ಮರ್ಕ್ಯೂರಿ ಬಾಬಾ ವಿಧಿವಶ…ಲೈವ್ ನಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಬಾಬಾ ಇನ್ನಿಲ್ಲ…


ಮರ್ಕ್ಯೂರಿ ಬಾಬಾ ವಿಧಿವಶ…ಲೈವ್ ನಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಬಾಬಾ ಇನ್ನಿಲ್ಲ…

ಮೈಸೂರು,ಡಿ22,Tv10 ಕನ್ನಡ
ಖಾಸಗಿ ಚಾನೆಲ್ ಗಳ ನೇರಪ್ರಸಾರದಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಮರ್ಕ್ಯೂರಿ ಬಾಬಾ ವಿಧಿವಶರಾಗಿದ್ದಾರೆ.ಉದಯಗಿರಿಯಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಸಿಲುಕಿದ್ದ ಜುನೈದ್ @ಮರ್ಕ್ಯೂರಿ ಬಾಬಾ ರವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.ದುಬೈಗೆ ತೆರಳಿದ್ದ ಮರ್ಕ್ಯೂರಿ ಬಾಬಾ ರವರು ನಾಲ್ಕು ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಮೈಸೂರಿನ ಮನೆಗೆ ತಲುಪಿದ್ದರು.ಮನೆಯಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆಯುತ್ತಿತ್ತು.ಬುಧುವಾರ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆಗಳಿಗೆ ಔಷಧಿ ನೀಡುತ್ತಿದ್ದ ಜುನೈದ್ ಜನಶ್ರೀ ಚಾನೆಲ್ ನಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಪಾದರಸವನ್ನ ಕುಡಿದಿದ್ದರು.ಅಲ್ಲದೆ ಹಾವಿನ ವಿಷವನ್ನೂ ಸಹ ಸೇವಿಸಿ ಸಾವಿಗೇ ಸವಾಲೊಡ್ಡಿದ್ದರು.ಹಕವಾರು ರೋಗಗಳಿಗೆ ಔಷಧಿ ನೀಡಿ ಮರ್ಕ್ಯೂರಿ ಬಾಬಾ ಎಂದೇ ಖ್ಯಾತಿ ಪಡೆದಿದ್ದರು.ಇವರಿಗೆ ದೇಶದ ಮೂಲೆ ಮೂಲೆಗಳಲ್ಲೂ ಅಭಿಮಾನಿಗಳಿದ್ದರು.ಹಲವರು ಇವರ ನೀಡಿದ ಔಷಧಿ ಸೇವಿಸಿ ಗುಣಮುಖರಾಗಿದ್ದರು.45 ವರ್ಷದ ಮರ್ಕ್ಯೂರಿ ಬಾಬ ಇನ್ನು ಕೇವಲ ನೆನಪು ಮಾತ್ರ.ಸೂಫಿ ಸಂತರಾಗಿದ್ದ ಇವರ ಅಂತ್ರಕ್ರಿಯೆ ಇಂದು ಬೆಳಿಗ್ಗೆ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಪುಲಕೇಶಿ ರಸ್ತೆಬಳಿ ಇರುವ ಖಬರ್ ಸ್ಥಾನದಲ್ಲಿ ಅಂತ್ಯ ಕ್ರಿಯೆ ನೆರವೇರಿದೆ…