ಸಯ್ಯಾಜಿರಾವ್ ರಸ್ತೆಯಲ್ಲಿರಯವ ಸತ್ಯನಾರಾಯಣ ಸ್ವಾಮಿ ದೇಗುಲದಲ್ಲಿ ಕಳ್ಳತನ…ಹುಂಡಿ ಹಣ ದೋಚಿದ ಖದೀಮರು…
- Crime
- January 4, 2023
- No Comment
- 164
ಸಯ್ಯಾಜಿರಾವ್ ರಸ್ತೆಯಲ್ಲಿರಯವ ಸತ್ಯನಾರಾಯಣ ಸ್ವಾಮಿ ದೇಗುಲದಲ್ಲಿ ಕಳ್ಳತನ…ಹುಂಡಿ ಹಣ ದೋಚಿದ ಖದೀಮರು…
ಮೈಸೂರು,ಜ4,Tv10 ಕನ್ನಡ
ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸತ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿದೆ.
ದೇವಾಲಯ ದ ಹುಂಡಿ ಹೊಡೆದು ಹಣ ದೋಚಲಾಗಿದೆ.
ಸ್ಥಳಕ್ಕೆ ಮಂಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬೆರಳಚ್ಚು ತಜ್ಞರಿಂದಲೂ ಪರಿಶೀಲನೆ ನಡೆಯುತ್ತಿದೆ.
ಕಳೆದ ಎಂಟು ವರ್ಷದಿಂದ ಆಡಳಿತ ಮಂಡಳಿ ಹುಂಡಿ ಏಣಿಕೆ ಮಾಡಿಲ್ಲವೆಂದು ತಿಳಿದು ಬಂದಿದೆ.ಅಪಾರ ಮೊತ್ತದ ಹಣ ಕಳುವಾಗಿರುವ ಶಂಕೆ ಇದೆ.ಮಂಡಿ ಮೊಹಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ…