ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮೈಸೂರು,ಜ3,Tv10 ಕನ್ನಡ
ಸ್ಕೂಟರ್ ರೈಡಿಂಗ್ ತರಬೇತಿ ನೀಡುವ ನೆಪದಲ್ಲಿ ಚಿನ್ನಾಭರಣ ದೋಚಿದ ಮೂವರು ಖತರ್ ನಾಕ್ ಕಳ್ಳಿಯರು ಮೈಸೂರು ಕುವೆಂಪುನಗರ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.ಬಂಧಿತರಿಂದ 7.5 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ,12 ಸಾವಿರ ನಗದು,ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಮೂರು ಮೊಬೈಲ್ ಗಳನ್ನ ವಶಪಡಿಸಿಕೊಂಡಿದ್ದಾರೆ.ಅಮೃತ(38),ಅಶ್ವಿನಿ(28) ಹಾಗೂ ಶೃತಿ (26) ಬಂಧಿತ ಆರೋಪಿಗಳು.

ಕುವೆಂಪುನಗರದ ಎ& ಬಿ ಬ್ಲಾಕ್ ನ ನಿವಾಸಿ ಪೂರ್ಣಿಮ ರವರು ತಮ್ಮ ಮಗಳ ಮದುವೆಗಾಗಿ 150 ಗ್ರಾಂ ಚಿನ್ನಾಭರಣ,20 ಸಾವಿರ ನಗದು ಇಟ್ಟಿದ್ದರು.ಪ್ರತಿದಿನ ಸ್ಕೂಟರ್ ರೈಡಿಂಗ್ ಕಲಿಯಲು ಮೊದಲ ಆರೋಪಿ ಅಮೃತ ಬಳಿ ಹೋಗುತ್ತಿದ್ದರು.ಅಮೃತ ಮನೆಗೇ ಬಂದು ಪೂರ್ಣಿಮಾರನ್ನ ಪಿಕ್ ಮಾಡುತ್ತಿದ್ದರು.ಮನೆಯಲ್ಲಿ ಒಡವೆಗಳು ಇರುವುದನ್ನ ಪತ್ತೆಹಚ್ಚಿದ ಅಮೃತ ತನ್ನ ಸ್ನೇಹಿತೆಯರೊಂದಿಗೆ ಸ್ಕೆಚ್ ಹಾಕಿ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದಳು.ಬ್ಯೂಟಿಷಿಯನ್ ಅಶ್ವಿನಿ ಹಾಗೂ ಮನೆಗೆಲಸ ಮಾಡುವ ಶೃತಿ ಜೊತೆ ಸೇರಿಕೊಂಡು ನಕಲಿ ಬೀಗ ಸಿದ್ದಪಡಿಸಿ ಡಿಸೆಂಬರ್ 31 ರಂದು 150 ಗ್ರಾಂ ಚಿನ್ನ ಹಾಗೂ 12 ಸಾವಿರ ನಗದು ಕಳುವು ಮಾಡಿದ್ದಾರೆ.ಪೂರ್ಣಿಮ ರವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಸಿಪಿ ಎಂ.ಎಸ್.ಗೀತಾ ರವರ ಮಾರ್ಗದರ್ಶನದಲ್ಲಿ,ಎಸಿಪಿ ಗಂಗಾಧರಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಅರುಣ್ ರವರ ನೇತೃತ್ವದಲ್ಲಿ ಪಿಎಸ್ಸೈ ಕು.ರಾಧಾ,ಎಎಸ್ಸೈ ಮಹದೇವ ಹಾಗೂ ಸಿಬ್ಬಂದಿಗಳಾದ ಮಂಜುನಾಥ್,ಪುಟ್ಟಪ್ಪ,ನಾಗೇಶ್,ಯೋಗೇಶ್,ಹಜರತ್,ಸುರೇಶ್,ಮಾದೇಶ,ಮಹಿಳಾ ಸಿಬ್ಬಂದಿಗಳಾದ ಮಂಜುಳಾ,ಅಭಿಲಾಷ,ಅಶ್ವಿನಿ,ಕೃಷ್ಣವೇಣಿ,ಸೌಭಾಗ್ಯ ರವರು ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುವೆಂಪುನಗರ ಠಾಣೆ ಪೊಲೀಸರ ಈ ಪತ್ತೆ ಕಾರ್ಯವನ್ನ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್,ಹಾಗೂ ಡಿಸಿಪಿ ಮುತ್ತುರಾಜ್ ರವರು ಪ್ರಶಂಸಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *