ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿದ ಕರಾಟೆಪಟುಗೆ ಎನ್.ಆರ್.ಠಾಣೆ ಪೊಲೀಸರಿಂದ ಸನ್ಮಾನ…

ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿದ ಕರಾಟೆಪಟುಗೆ ಎನ್.ಆರ್.ಠಾಣೆ ಪೊಲೀಸರಿಂದ ಸನ್ಮಾನ…

ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿದ ಕರಾಟೆಪಟುಗೆ ಎನ್.ಆರ್.ಠಾಣೆ ಪೊಲೀಸರಿಂದ ಸನ್ಮಾನ…

ಮೈಸೂರು,ಜ10, Tv10 ಕನ್ನಡ
ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದ ಸೌಜನ್ಯ ರವರನ್ನ ಎನ್.ಆರ್.ಪೊಲೀಸ್ ಠಾಣೆಯ ಎಸ್ಸೈ ಜೈಕೀರ್ತಿ ಹಾಗೂ ಸಿಬ್ಬಂದಿಗಳು ಗೌರವಿಸಿ ಸನ್ಮಾನಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ಎಂ.ಎಸ್ಸಿ ವಿದ್ಯಾರ್ಥಿನಿ ಹಾಗೂ ಮೈಸೂರು ನಗರದ ರಾಜೇಂದ್ರ ನಗರ SGRR ಕರಾಟೆ & ಸ್ಪೋರ್ಟ್ಸ್ ಶಾಲೆಯ ಕರಾಟೆ ತರಬೇತುದಾರ ಲೋಕೇಶ್ ರವರಲ್ಲಿ ಓಕಿನಾವ ಶೋಟಾಕಾನ್ ಶೈಲಿಯ ಕರಾಟೆ ಅಭ್ಯಾಸ ಮಾಡುತ್ತಿರುವ ಸೌಜನ್ಯ, ಮೈಸೂರಿನ ಇಲಾವಾಲ ನಿವಾಸಿಯಾಗಿದ್ದಾರೆ. ಈವರೆಗೆ 6 ಬಾರಿ ಯೂನಿವರ್ಸಿಟಿ ಚಾಂಪಿಯನ್ ಆಗಿದ್ದು, 30 ರಾಜ್ಯಮಟ್ಟದ ಪದಕಗಳನ್ನು, 13 ರಾಷ್ಟ್ರಮಟ್ಟದ ಪ್ರಶಸ್ತಿ ಗಳನ್ನು, 2 ಅಂತರ್ರಾಷ್ಟ್ರೀಯ ಪ್ರಶಸ್ತಿ ಗಳನ್ನು ಗೆದ್ದು ದೇಶಕ್ಕೆ, ರಾಜ್ಯಕ್ಕೆ, ವಿಶೇಷ ವಾಗಿ ಮೈಸೂರಿಗೆ ಹೆಮ್ಮೆ ತಂದಿದ್ದಾರೆ. ಪ್ರತಿಭಾವಂತೆ ಸೌಜನ್ಯ ರವರನ್ನು ಈ ದಿನ ನರಸಿಂಹರಾಜ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ. ಜೈಕೀರ್ತಿ ರವರು ಹಾಗೂ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಇಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಹಾಗೂ ಆತ್ಮಸ್ಥೈರ್ಯಕ್ಕೆ ಅತ್ಯಂತ ಉಪಯುಕ್ತವಾಗಿರುವ ಕರಾಟೆ ಯಲ್ಲಿ ಸೌಜನ್ಯ ರಂತಹ ಹೆಣ್ಣು ಮಗಳ ಸಾಧನೆ ಶ್ಲಾಘನೀಯ ಮತ್ತು ಅವರ ಸಾಧನೆ ಎಲ್ಲ ಹೆಣ್ಣುಮಕ್ಕಳಿಗೂ ಪ್ರೇರಣಾದಯಕ ಎಂದು ಈ ಸಂದರ್ಭದಲ್ಲಿ ಪಿಎಸ್ಐ ಜೈಕೀರ್ತಿ ರವರು ಅಭಿಪ್ರಾಯ ಪಡುತ್ತಾ ಕುಮಾರಿ ಸೌಜನ್ಯ ರವರು ಇನ್ನಷ್ಟು ಸಾಧನೆಗಳನ್ನು ಮಾಡಿ ದೇಶಕ್ಕೆ ರಾಜ್ಯಕ್ಕೆ ನಮ್ಮ ಮೈಸೂರಿಗೆ ಕೀರ್ತಿ ತರಲಿ ಎಂದು ಹಾರೈಸಿ ಸನ್ಮಾನಿಸಿದ್ದಾರೆ…

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *