- January 13, 2023
ಧಾರ್ಮಿಕ ಪ್ರಜ್ಞೆಯಿಂದ ಸ್ವಸ್ಥ ಸಮಾಜ ಸಾಧ್ಯ:ವಸ್ತುಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ


ಧಾರ್ಮಿಕ ಪ್ರಜ್ಞೆಯಿಂದ ಸ್ವಸ್ಥ ಸಮಾಜ ಸಾಧ್ಯ:ವಸ್ತುಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ
ಮೈಸೂರು,ಜ12,Tv10 ಕನ್ನಡ
ಸನಾತನ ಧರ್ಮದ ಪ್ರಕಾರ ಮನುಷ್ಯನು ಭಗವಂತನಲ್ಲಿ ಐಕ್ಯವಾಗಲು ರಾಜಯೋಗ’ ಭಕ್ತಿಯೋಗ ಕರ್ಮಯೋಗ, ಜ್ಞಾನಯೋಗ ಎಂಬ ಮಾರ್ಗಗಳಿವೆ. ಅಯ್ಯಪ್ಪ ವ್ರತ ಮಾಡುವವರು ಭಕ್ತಿ ಯೋಗದ ಮೂಲಕ ದೈವಸ್ವರೂಪದ ಅನುಭವವನ್ನು ಪಡೆಯುತ್ತಾರೆ ಎಂದು ವಸ್ತು ಪ್ರದರ್ಶನ ಮಾಜಿ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ತಿಳಿಸಿದ್ದಾರೆ.
ರಾಘವೇಂದ್ರನಗರದಲ್ಲಿರುವ ಶ್ರೀ ಅಭಯಂ ಫೌಂಡೇಶನ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ಮತ್ತು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಹೊದಿಕೆ ಮತ್ತು ಅಯ್ಯಪ್ಪ ಮಾಲಧಾರಿಗಳ ವಸ್ತ್ರ ವಿತರಿಸುವ ಮೂಲಕ ಬ್ರಹ್ಮ ಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೂಗಳು ಜಾತಿ ಮತ ಭೇದ ಬದಿಗಿಟ್ಟು
ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು, ಊರಿನ ದೈವ ದೇವಸ್ಥಾನಗಳು ಅಭಿವೃದ್ಧಿಗೊಂಡಲ್ಲಿ ಸುಭಿಕ್ಷೆ ನೆಲೆಗೊಳ್ಳುವುದು ಎಂದು ಹೇಳಿದರು, ಧಾರ್ಮಿಕ ಪ್ರಜ್ಞೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ನಿರಂತರವಾಗಿ ಶ್ರದ್ದಾ ಕೇಂದ್ರಗಳಿಗೆ ಭೇಟಿ ನೀಡುವುದರಿಂದ ನೆಮ್ಮದಿ ಕಾಣುಲು ಸಾಧ್ಯವೆಂದರು. ಸಾಮರಸ್ಯ ಸಾರುವ
ಸಂಕೇತ ಅಯ್ಯಪ್ಪಸ್ವಾಮಿಯ ಆರಾಧನೆಯಲ್ಲಿ ಪ್ರಕೃತಿಯ ತತ್ವವಿದೆ ಸಾಮರಸ್ಯ ಸಾರುವ ಸಂಕೇತದ ಮೂಲಕ ಜಾತ್ಯತೀತ ಮನೋಧರ್ಮ ಅಡಗಿದೆ ಎಂದರು.
ಕಾರ್ಯಕ್ರಮದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಅಭಯಂ ಫೌಂಡೇಶನ್ ಅಧ್ಯಕ್ಷರಾದ ಮುರುಳಿಧರ್ ಶಾಸ್ತ್, ಡಾಕ್ಟರ್ ಚಕ್ರಪಾಣಿ, ಸುಚಿಂದ್ರ, ವೆಂಕಟೇಶ್, ದೇವಸ್ಥಾನದ ಅರ್ಚಕರಾದ ಎಂ ಎಸ್ ಮೋಹನ್ ಕುಮಾರ್, ಹಾಗೂ ಇನ್ನಿತರರು ಭಾಗವಹಿಸಿದರು…