• January 23, 2023

ನೇತಾಜಿ ವಿಚಾರ ಮೈಗೂಡಿಸಿಕೊಳ್ಳಿ: ಮೇಯರ್ ಶಿವಕುಮಾರ್ ಕರೆ…

ನೇತಾಜಿ ವಿಚಾರ ಮೈಗೂಡಿಸಿಕೊಳ್ಳಿ: ಮೇಯರ್ ಶಿವಕುಮಾರ್ ಕರೆ…

ನೇತಾಜಿ ವಿಚಾರ ಮೈಗೂಡಿಸಿಕೊಳ್ಳಿ: ಮೇಯರ್ ಶಿವಕುಮಾರ್ ಕರೆ…

ಮೈಸೂರು,ಜ23,Tv10 ಕನ್ನಡ
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಭಾರತೀಯ ಭೂಸೇನಾ ಸಂಸ್ಥಾಪಕ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 126ನೇ ಜನ್ಮದಿನದ ಅಂಗವಾಗಿ ಜೈ ಹಿಂದ್ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸುಭಾಷ್ ಚಂದ್ರ ಬೋಸ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮೇಯರ್ ಶಿವಕುಮಾರ್ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಜನ್ಮದಿನ ಆಚರಿಸಿದರಷ್ಟೇ ಸಾಲದು; ಅವರ ಆದರ್ಶ ವಿಚಾರಗಳನ್ನು ಜೀವನದಲ್ಲಿ ಆದರ್ಶವಾಗಿ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಹೆಚ್ಚು ರಾಷ್ಟ್ರೀಯ ಮನೋಭಾವ ದೇಶಪ್ರೇಮದ ವೈಚಾರಿಕವಾಗಿ ಚಿಂತಿಸಬೇಕು. ನೇತಾಜಿ ಅವರು ಹೇಳಿದಂತೆಯೇ ಪ್ರತಿಯೊಂದು ವಿಭಾಗದಲ್ಲೂ ನಡೆಯುವ ಅನ್ಯಾಯವನ್ನು ಪ್ರಶ್ನಿಸುವ ಗುಣ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮದಲ್ಲಿ
ಶಾಸಕರಾದ ಎಲ್ ನಾಗೇಂದ್ರ,ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್, ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬಿಜೆಪಿ ಚಾಮರಾಜ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಅಜಯ್ ಶಾಸ್ತ್ರಿ, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್,ಎಸ್ ಎನ್ ರಾಜೇಶ್, ಚರಣ್ ,ಶ್ರೀನಿವಾಸ್, ಯುವ ಭಾರತ್ ಸಂಘಟನೆಯ ಸಂಚಾಲಕರಾದ ಆನಂದ್, ಶರತ್ ಭಂಡಾರಿ, ವಾರ್ಡ್ ಅಧ್ಯಕ್ಷರಾದ ಸುರೇಂದ್ರ,
ರಾಕೇಶ್, ಚಂದ್ರು, ಲಿಂಗರಾಜು, ರಂಗನಾಥ್, ಮೋಹನ್ ಕುಮಾರ್ ಗೌಡ, ನವೀನ್ , ಸೂರಜ್, ಸದಾಶಿವ ಹಾಗೂ ಇನ್ನಿತರರು ಭಾಗಿಯಾಗಿದ್ದರು…

Spread the love

Leave a Reply

Your email address will not be published.