ಗ್ರಾಮದಲ್ಲೇ ರಾಜಿ ಮಾಡಿಕೊಳ್ಳದೆ ಪೊಲೀಸರ ಮೊರೆ ಹೋದ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ…ಜಿಲ್ಲಾಧಿಕಾರಿಗಳ ಮುಂದೆ ಆತ್ಮಹತ್ಯೆಗೆ ನಿರ್ಧಾರ…
ಚಾಮರಾಜನಗರ,ಅ24,Tv10 ಕನ್ನಡ ಗಲಾಟೆ ವಿಚಾರಕ್ಕೆ ಸಂಭಂಧಿಸಿದಂತೆ ಕುಟುಂಬವೊಂದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಹಿನ್ನಲೆ ಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆ ಹರದನಹಳ್ಳಿ ಹೋಬಳಿ ಕಿಲಗೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಎರಡು ವರ್ಷಗಳ ಹಿಂದೆ ಹೇರಿದ ಬಹಿಷ್ಕಾರದಿಂದ ನೊಂದಿರುವ ಕುಟುಂಬ ನ್ಯಾಯಕ್ಕಾಗಿ ಅಲೆದು ಹೈರಾಣರಾಗಿದ್ದಾರೆ.ನ್ಯಾಯ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಕಿಲಗೆರೆ ಗ್ರಾಮದ ಸಿದ್ದರಾಜು ಕುಟುಂಬದ ಮೇಲೆ ಗ್ರಾಮದ ಮುಖಂಡರಾದ ಮಲ್ಲಯ್ಯ,ಮಸಣಯ್ಯ,ಬಸವರಾಜು,ಚೆನ್ನಯ್ಯ,ಬಸವಯ್ಯ ಹಾಗೂ ಇತರರು
Read More