ನೀರಿನ ದರ ಏರಿಕೆ…ಬಿಜೆಪಿ ಖಂಡನೆ… ಮಾಜಿ ಶಾಸಕ ಹರ್ಷವರ್ಧನ್ ನೇತೃತ್ವದಲ್ಲಿ ಪ್ರತಿಭಟನೆ…
ನಂಜನಗೂಡು,ನ14,Tv10 ಕನ್ನಡ ಕುಡಿಯುವ ನೀರಿನ ದರ ಏರಿಕೆ ಖಂಡಿಸಿ ಪ್ನಂಜನಗೂಡು ಆಡಳಿತದ ವಿರುದ್ಧ ಬಿಜೆಪಿ ಪ್ರತಿಙಟನೆ ನಡೆಸಿದೆ.ನಗರಸಭಾ ಕಚೇರಿ ಬಳಿ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.ಮಾಜಿ ಶಾಸಕ ಹರ್ಷವರ್ಧನ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.ಕುಡಿಯುವ ನೀರಿಗೆ ನೀಡುತ್ತಿರುವ ಬಿಲ್ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಅನಧಿಕೃತ ಬಡಾವಣೆಗಳಿಗೆ ಎನ್ಓಸಿ ನೀಡಿ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.ತಮ್ಮಿಷ್ಟದಂತೆ ಕುಡಿಯುವ ನೀರಿನ ಬಿಲ್ ಕಳುಹಿಸುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ…
Read More