TV10 Kannada Exclusive

ಮಾವಿನಕಾಯಿಗಾಗಿ ಗಲಾಟೆ…ಓರ್ವನ ಕೊ* ಯಲ್ಲಿ ಅಂತ್ಯ…

ಹುಣಸೂರು,ಮೇ19,Tv10 ಕನ್ನಡ ಮಾವಿನಕಾಯಿ ಕೊಯ್ಯುವ ವಿಚಾರದಲ್ಲಿ ಶುರುವಾದ ಜಗಳ ಓರ್ವನ ಕೊಯಲ್ಲಿ ಅಂತ್ಯವಾದ ಘಟನೆ ಹುಣಸೂರು ತಾಲೂಕಿನ ಶಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಲ್ಲೇಶ್ ಮೃತ ದುರ್ದೈವಿ.ಕೊ ಆರೋಪಿ ಚೇತನ್ ಇದೀಗ ಪೊಲೀಸರ ವಶದಲ್ಲಿದ್ದಾನೆ. ಶಂಕಹಳ್ಳಿಯಲ್ಲಿರುವ ಜಮೀನಿನಲ್ಲಿ ಮಲ್ಲೇಶ್ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಜಮೀನು ವಿಚಾರದಲ್ಲಿ ವಿವಾದ ಶುರುವಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು.ಈ ವೇಳೆ ಮಲ್ಲೇಶ್ ಜಮೀನಿನಲ್ಲಿದ್ದ ಮಾವಿನ ಮರದಿಂದ ಕಾಯಿಗಳನ್ನ ಕೀಳಿಸುವಾಗ ಚೇತನ್ ಕಿರೀಕ್ ತೆಗೆದಿದ್ದಾನೆ.ಈ ವೇಳೆ ಮಾತಿಗೆ ಮಾತು ಬೆಳೆದಿದೆ.ಚೇತನ್ ಜೊತೆ
Read More

ರೈಲ್ವೆ ಸೆಂಟ್ರಲ್ ವರ್ಕ್ ಷಾಪ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ…ಕೊಲೆ ಬೆದರಿಕೆ…ನಾಲ್ವರು ಹಿರಿಯ ಅಧಿಕಾರಿಗಳ ವಿರುದ್ದ FIR ದಾಖಲು…

ಮೈಸೂರು,ಮೇ18,Tv10 ಕನ್ನಡ ಮೈಸೂರು ಕೇಂದ್ರ ರೈಲ್ವೆ ವರ್ಕ್ ಷಾಪ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ನಾಲ್ವರು ಹಿರಿಯ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಲಾಗಿದೆ.ನೊಂದ ಮಹಿಳಾ ಸಿಬ್ಬಂದಿ ನಾಲ್ವರು ಹಿರಿಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಒಬ್ಬ ಅಧಿಕಾರಿ ಬಿಹಾರದಿಂದ ಹುಡುಗರನ್ನ ಕರೆಸಿ ಶೂಟ್ ಮಾಡಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ. ಎಸಿ ಮೆಕ್ಯಾನಿಕಲ್
Read More

ಗ್ರಾ.ಪಂ.ವ್ಯಾಪ್ತಿಯಲ್ಲಿ ನಿರ್ಮಾಣವಾದ ಅನಧಿಕೃತ ಕಟ್ಟಡಗಳ ನೆಲಸಮಗೊಳಿಸಲು ಸರ್ಕಾರದಿಂದ ಆದೇಶ…ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾದ ಕಟ್ಟಡ ಮಾಲೀಕರಿಗೆ ಶಾಕ್…

ಮೈಸೂರು,ಮೇ16,Tv10 ಕನ್ನಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳನ್ನ ನೆಲಸಮಗೊಳಿಸುವಂತೆ ಸರ್ಕಾರದಿಂದ ಎಲ್ಲಾ ಗ್ರಾಮ ಪಂಚಾಯ್ತಿಗೆ ಆದೇಶ ಹೊರಡಿಸಲಾಗಿದೆ.ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ವಾಣಿಜ್ಯ,ವಸತಿ ಹಾಗೂ ಇತರೆ ಕಟ್ಟಡಗಳ ಕಾಮಗಾರಿ ಸ್ಥಗಿತಗೊಳಿಸುವುದು ಹಾಗೂ ಪೂರ್ಣಗೊಂಡ ಕಟ್ಟಡಗಳನ್ನ ನೆಲಸಮಗೊಳಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಎಲ್ಲಾ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಆದೇಶವನ್ನ ಪಾಲಿಸುವಂತೆ ಸೂಚಿಸಲಾಗಿದೆ.ಆದೇಶ ಪಾಲಿಸಲು ಕೆಲವು ಮಾರ್ಗಸೂಚಿಗಳನ್ನೂ ಸಹ ನೀಡಿದೆ.ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆಯದೆ ನಿರ್ಮಾಣವಾಗುತ್ತಿರುವ ಕಟ್ಟಡ
Read More

ಗಾಂಜಾ ಸಂಗ್ರಹಿಸಿದ್ದ ಮಹಿಳೆ ಸಿಸಿಬಿ ಪೊಲೀಸರ ವಶಕ್ಕೆ…

ಮೈಸೂರು,ಮೇ10,Tv10 ಕನ್ನಡ ಗಾಂಜಾ ಸಂಗ್ರಹ ಮಾಡಿದ್ದ ಮಹಿಳೆಯನ್ನ ಮೈಸೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಲ್ಮಾ (50)ಬಂಧಿತ ಆರೋಪಿ. ಆರೋಪಿಯಿಂದ 26 ಕೆ ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ನಗರದ ಪೋರೋಂ ಮಾಲ್ ಬಳಿ ಬಚ್ಚಿಟ್ಟಿದ್ದ ಗಾಂಜಾ ವಶಕ್ಕೆ ಪಡೆಯಲಾಗಿದೆ.ಎಸಿಪಿಗಳಾದ ಮಹಮದ್ ರಾವತ್ಕರ್ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.ಇನ್ಸಪೆಕ್ಟರ್ ಶಬ್ಬೀರ್ ಹುಸೇನ್ ಸಬ್ ಇನ್ಸಪೆಕ್ಟರ್ ಲೇಪಾಕ್ಷ ರಾಜು ಸೇರಿ ಹಲವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ…
Read More

ಭಾರತ ಸೈನಿಕರ ಹೆಸರಿನಲ್ಲಿ ಹನುಮಾನ್ ಚಾಲಿಸ ಪಠಣೆ…ಬಿಜೆಪಿ ಕಾರ್ಯಕರ್ಯರಿಂದ ವಿಶೇಷ ಪೂಜೆ…

ಮೈಸೂರು,ಮೇ9,Tv10 ಕನ್ನಡ ಪಾಕ್ ಉಗ್ರರ ಮೇಲೆ ಭಾರತದ ಸೈನಿಕರಿಂದ ಸಿಂಧೂರ್ ಆಪರೇಷನ್ಯೋಧರ ಹೆಸರಿನಲ್ಲಿ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಮೈಸೂರಿನ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರುಕೋಟೆ ಆಂಜನೇಯ ದೇವಸ್ಥಾನದಲ್ಲಿ ಸೈನಿಕರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಹನುಮಾನ್ ಚಾಲೀಸ ಪಠಣೆ ಮಾಡಿದರು.ಪಾಕಿಸ್ತಾನದ ವಿರುದ್ಧ ಹೋರಾಡುತ್ತಿರುವ ಸೈನಿಕರಿಗೆ ಶಕ್ತಿ ತುಂಬಲು ಹನುಮಾನ್ ಚಾಲೀಸ ಪಠಣೆ ಮಾಡಿದರು.ನಂತರಇಡುಗಾಯಿ ಹೊಡೆಯುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.ಯುದ್ಧದಲ್ಲಿ ದುಷ್ಟ ಶಕ್ತಿ ಸಂಹಾರ ಆಗಲಿ.ಸೈನಿಕರಿಗೆ ರಾಮನ ಆಶೀರ್ವಾದ ಹನುಮನ ಶಕ್ತಿ
Read More

ಸಿಡಿಯಮ್ಮನ ಜಾತ್ರಾ ಮಹೋತ್ಸವ ಸಂಭ್ರಮ…ಸಂಸದ ಯದುವೀರ್ ಭಾಗಿ…ವಿಶೇಷ ಪೂಜೆ…

ಹುಣಸೂರು,ಮೇ2,Tv10 ಕನ್ನಡ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಸಿಡಿಯಮ್ಮನ ಜಾತ್ರಾ ಮಹೋತ್ಸವ ಅದ್ದೂರಿಯಿಂದ ನೆರವೇರಿತು.ಹಲವಾರು ಐತಿಹ್ಯವುಳ್ಳ, ರಾಜ್ಯಾದ್ಯಂತ ಭಕ್ತರನ್ನು ಹೊಂದಿರುವ, ಪವಾಡದ ಜಾತ್ರೆಯೆಂದೇ ಪ್ರತಿಬಿಂಬಿತವಾಗಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.ನಾಡಿನ ಒಳಿತಿಗಾಗಿ ಭಕ್ತಿಯಿಂದ ಪ್ರಾರ್ಥಿಸಿದರು. ಅನಾದಿಕಾಲದಿಂದಲೂ ಹಲವಾರು ಸಮುದಾಯಗಳು ಸೇರಿ ಕೆಲಸವನ್ನು ಹಂಚಿಕೊಂಡು ಅದ್ದೂರಿಯಾಗಿ ನೆರವೇರಿಸುವ ಈ ಜಾತ್ರೆ ಸರ್ವಜನಾಂಗದ ಜಾತ್ರೆ ಎಂದೇ ವಿಶೇಷವಾಗಿದೆ.ನಾಡಿನ ವಿವಿದ ಭಾಗಗಳಿಂದ
Read More

ಮರದ ಬಳಿ ಮಲಗಿದ್ದ ರೈತನ ಕಾಲುಗಳ ಮೇಲೆ ಹರಿದ ಟಿಪ್ಪರ್…ಎರಡು ಕಾಲುಗಳು ಮುರಿತ…

ಮಂಡ್ಯ,ಏ30,Tv10 ಕನ್ನಡ ಅರಳಿ ಮರದ ಕೆಳಗೆ ವಿರಮಿಸುತ್ತಿದ್ದ ರೈತನ ಕಾಲುಗಳ ಮೇಲೆ ಟಿಪ್ಪರ್ ಹರಿದ ಮಂಡ್ಯ ಜಿಲ್ಲೆ ಕೆ.ಆರ್‌‌.ಪೇಟೆ ತಾಲೂಕಿನ ಆಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪುಟ್ಟೇಗೌಡ ಎಂಬುವವರ ಮೇಲೆ ಹರಿದ ಪರಿಣಾಮ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ.ಪುಟ್ಟೇಗೌಡರ ಎರಡು ಕಾಲುಗಳು ನಜ್ಜುಗುಜ್ಜಾಗಿದೆ.ಗಾಯಾಳುವನ್ನ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…
Read More

ಮಳೆ ಎಫೆಕ್ಟ್…ಮನೆ ಮೇಲೆ ಉರುಳಿದ ಮರ,ವಿದ್ಯುತ್ ಕಂಬ…ತಪ್ಪಿದ ಅನಾಹುತ…ಸ್ಥಳಕ್ಕೆ ಬಾರದ ಅಧಿಕಾರಿಗಳು…

ಮೈಸೂರು,ಏ30,Tv10 ಕನ್ನಡ ನಿನ್ನೆ ಸುರಿದ ಭಾರಿ ಮಳೆಗೆ ಮನೆಯೊಂದರ ಮೇಲೆ ವಿದ್ಯುತ್ ಕಂಬ ಹಾಗೂ ಮರ ಉರುಳಿಬಿದ್ದಿದೆ.ಮೈಸೂರಿನ ಬೃಂದಾವನ ಬಡಾವಣೆ 7 ನೇ ಕ್ರಾಸ್ ನ ಪ್ರಿಯದರ್ಶಿನಿ ಆಸ್ಪತ್ರೆ ಬಳಿ ಇರುವ ಮನೆ ನಂ15 ಮೇಲೆ ಬಿದ್ದಿದೆ.ವಿದ್ಯುತ್ ಸಂಪರ್ಕ ಕಡಿತವಾದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರವನ್ನ ತೆರುವುಗೊಳಿಸುವಂತೆ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ.ವಿದ್ಯುತ್ ತಂತಿ ಮನೆಯ ಮೇಲೆ ಸುರುಳಿ ಸುತ್ತಿಕೊಂಡು ಬಿದ್ದಿದೆ.ಅದೃಷ್ಟವಶಾತ್
Read More

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ವಿರುದ್ದ ಶಿಸ್ತುಕ್ರಮಕ್ಕೆ ಮುಂದಾದ ಪ್ರಾಧಿಕಾರ…ಮೃತ ವ್ಯಕ್ತಿಯ ಆಸ್ತಿ ಕಬಳಿಸಲು ದಾಖಲೆ ಮಾಡಿಕೊಟ್ಟ ಆರೋಪ…ಮುಡಾ ಆಯುಕ್ತರಿಂದ

ಮೈಸೂರು,ಏ29,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಮತ್ತೊಂದು ವಿಕೆಟ್ ಉರುಳಲಿದೆ.ಕೆಲವೇ ದಿನಗಳ ಹಿಂದೆ ಒಬ್ಬರನ್ನ ಅಮಾನತುಗೊಳಿಸಿದ್ದ ಆಯುಕ್ತರು ಇಂದು ಮತ್ತೊಬ್ಬ ಅಧಿಕಾರಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ.ಸೂಕ್ತ ಕ್ರಮ ಕೈಗೊಳ್ಳಲು ಅನುಮತಿ ಕೋರಿ ನಗರಾಭಿವೃದ್ದಿ ಪ್ರಾಧಿಕಾರ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಿಗೆ ಪತ್ರ ಬರೆದಿದ್ದಾರೆ.ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ನೀಡಿದ ದೂರಿನ ಹಿನ್ನಲೆ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ರವರ ಮೇಲೆ
Read More

ಮೈಸೂರು ಸಿನಿಮಾ ಸೊಸೈಟಿಯ ಅಂತರಾಷ್ಟ್ರೀಯ ಚಿತ್ರೋತ್ಸವದ ಪರಿದೃಶ್ಯ ನಾಲ್ಕನೇ ಆವೃತ್ತಿಯ ಬ್ರೋಷರ್ ಬಿಡುಗಡೆ…ಕಿರುಚಿತ್ರ,ಸಾಕ್ಷ್ಯಚಿತ್ರಗಳಿಗೆ ಆಹ್ವಾನ…

ಮೈಸೂರು,ಏ28,Tv10 ಕನ್ನಡ ಮೈಸೂರು ಸಿನಿಮಾ ಸೊಸೈಟಿಯ ಪ್ರಮುಖ ಚಿತ್ರೋತ್ಸವವಾದ ಪರಿದೃಶ್ಯ ನಾಲ್ಕನೇ ಆವೃತ್ತಿಯ ಬ್ರೋಷರ್ ಬಿಡುಗಡೆ ಮಾಡಲಾಯಿತು. 6/02/2026 ರಿಂದ 8/02/2026 ವರೆಗೆ ನಡೆಯುವ ಚಿತ್ರೋತ್ಸವವನ್ನ ವಿದ್ಯಾರ್ಥಿ ಮತ್ತು ವೃತ್ತಿಪರ ವಿಭಾಗಗಳಿಗೆ ಆಯೋಜಿಸಲಾಗಿದೆ.ಪರಿದೃಶ್ಯ ನಾಲ್ಕನೇ ಆವೃತ್ತಿಯ ಚಿತ್ರೋತ್ಸವಕ್ಕೆ ಕಿರುಚಿತ್ರ ಮತ್ತು ಸಾಕ್ಷ ಚಿತ್ರಗಳನ್ನು ಆಹ್ವಾನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷ ಚೇತನ್ ಎಂ ತಿಳಿಸಿದರು‌.ಈ ಸ್ಪರ್ಧೆಯಲ್ಲಿ ಭಾಗವಹಿಸಲು ಚಿತ್ರಗಳು 1/01/2024ರ ನಂತರ ಚಿತ್ರೀಕರಣಗೊಂಡಿರಬೇಕು.ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ ಅತ್ಯುತ್ತಮ ನಿರ್ದೇಶಕ,
Read More