TV10 Kannada Exclusive

ಬಂಡೀಪುರ ಮುಖ್ಯ ರಸ್ತೆ ಬಳಿ ಕರಡಿ ದರುಶನ…ಮುಡಾ ಮಾಜಿ ಅಧ್ಯಕ್ಷ ರಾಜೀವ್ ರವರ ಮೊಬೈಲ್ ನಲ್ಲಿ ದೃಶ್ಯ ಸೆರೆ…

ಮೈಸೂರು,ಡಿ31,Tv10 ಕನ್ನಡ ಬಂಡಿಪುರ ಅರಣ್ಯ ವಲಯದ ಮುಖ್ಯರಸ್ತೆಯಲ್ಲಿ ಕರಡಿ ದರುಶನ ನೀಡಿದೆ.ರಸ್ತೆ ಬಳಿಯಲ್ಲೇ ಕುಳಿತಿದ್ದ ಕರಡಿಯ ದೃಶ್ಯ ಮುಡಾ ಮಾಜಿ ಅಧ್ಯಕ್ಷ ರಾಜೀವ್ ರವರ ಮೊಬೈಲ್ ನಲ್ಲಿ ಸೆರೆಯಾಗಿದೆ.ನಿನ್ನೆ ಕುಟುಂ ಸಮೇತ ಮದುಮಲೈ ಗೆ ತೆರಳಿದ್ದ ರಾಜೀವ್ ರವರು ಹಿಂದಿರುಗಿ ಬರುವಾಗ ಅಪರೂಪದ ದೃಶ್ಯ ಕಂಡು ಬಂದಿದೆ.ಸಹಜವಾಗಿ ಕರಡಿಗಳು ರಸ್ತೆ ಬಳಿ ಕಾಣಿಸಿಕೊಳ್ಳುವುದಿಲ್ಲ.ಆದ್ರೆ ನಿನ್ನೆ ರಸ್ತೆ ಬಳಿ ಕಾಣಿಸಿಕೊಂಡ ಕರಡಿ ಸುಮಾರು 30 ಸೆಕೆಂಡುಗಳ ಕಾಲ ಒಂದೇ ಸ್ಥಳದಲ್ಲಿ ವಿರಮಿಸುತ್ತಾ
Read More

ಆರೋಪಿಯನ್ನ ಅರೆಸ್ಟ್ ಮಾಡಲು ತೆರಳಿದ ಪೊಲೀಸರಿಗೆ ಪ್ರತಿರೋಧ…ದಲಿತ ಸಂಘಟನೆ ಮುಖಂಡನ ವಿರುದ್ದ ಹೆಚ್.ಡಿ.ಕೋಟೆ ಇನ್ಸ್ಪೆಕ್ಟರ್ ರಿಂದ ದೂರು ದಾಖಲು…

ಟಿ.ನರಸೀಪುರ,ಡಿ31,Tv10 ಕನ್ನಡ ಆರೋಪಿಯೊಬ್ಬನನ್ನ ಅರೆಸ್ಟ್ ಮಾಡಲು ಬಂದ ಹೆಚ್.ಡಿ.ಕೋಟೆ ಪೊಲೀಸರ ವಿರುದ್ದ ತಿರುಗಿಬಿದ್ದ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.ಈ ಸಂಭಂಧ ಹೆಚ್.ಡಿ.ಕೋಟೆ ಠಾಣೆ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ರವರು ದಲಿತ ಸಂಘಟನೆ ಮುಖಂಡ ಸೋಮಣ್ಣ ಹಾಗೂ ಇತರರ ವಿರುದ್ದ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಭೂಮಿ ವಿವಾದ ಹಿನ್ನಲೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಜಮೀನು ಮಾಲೀಕ ಹಾಗೂ ಕುಟುಂಬದ ಮೇಲೆ ಹಲ್ಲೆ ನಡೆದಿತ್ತು.ದಲಿತ ಸಂಘಟನೆ ಮುಖಂಡ ಸಣ್ಣಕುಮಾರ ಹಾಗೂ ಇತರರ ಮೇಲೆ
Read More

ಚಾಮುಂಡಿಪುರಂ ವೃತ್ತದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ನೆನಪು

ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರದ ಚಾಮುಂಡಿ ಪುರಂ ವೃತ್ತದಲ್ಲಿ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ವಿಷ್ಣುವರ್ಧನ್ ರವರ ಭಾವಚಿತ್ರ ಹಿಡಿದು ಮೊಂಬತ್ತಿ ಬೆಳಗಿ ಗೌರವ ಸಲ್ಲಿಸಲಾಯಿತು ನಂತರದಲ್ಲಿ ವಿಷ್ಣುವರ್ಧನ್ ರವರ ಚಿತ್ರಗೀತೆಗಳನ್ನು ಕಾರ್ಯಕ್ರಮದಲ್ಲಿ ಕೇಳಿಸಲಾಯಿತು ಇದೇ ಸಂಧರ್ಭದಲ್ಲಿ ಸಂದೀಪ್ ರವರು ಮಾತನಾಡಿ ಸಾಹಸಸಿಂಹ ವಿಷ್ಣುವರ್ಧನ್ ರವರ ಚಿತ್ರಗಳು ಕೌಟುಂಬಿಕ ಪ್ರಧಾನವಾದುದು ಸಾಮಾಜಿಕ ಸಂದೇಶ ನೀಡುತ್ತಿದ್ದವು, ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ
Read More

ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಸ್ಮರಣೆ…ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ…

ಮೈಸೂರು,ಡಿ30,Tv10 ಕನ್ನಡ ಸಾಹಸಸಿಂಹ ವಿಷ್ಣುವರ್ಧನ್ ರವರ ಪುಣ್ಯಸ್ಮರಣೆ ಅಂಗವಾಗಿ ಇಂದು ಅಭಿಮಾನಿಗಳ ಬಳಗ ಹೊರತಂದಿರುವ 2025 ವರ್ಷದ ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.ಮೈಸೂರಿನ ಹೊರವಲಯದ ಉದ್ಬೂರ್ ಗೇಟ್ ಬಳಿ ಇರುವ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದಲ್ಲಿ ಹಿರಿಯನಟಿ ಭಾರತಿ ವಿಷ್ಣುವರ್ಧನ್ ಬಿಡುಗಡೆಗೊಳಿಸಿದರು. 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿವಿಷ್ಣುವರ್ಧನ್ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಮಾಲಾರ್ಪಣೆ ಮಾಡಿ ಬಿಡುಗಡೆಗೊಳಿಸಿದರು. ಈ ವೇಳೆ ನಟ ಅನಿರುದ್ಧ ರವರು ಸಾಥ್ ನೀಡಿದರು. ಕಾರ್ಯಕ್ರಮದ ನಂತರ ಜೀವದಾರ
Read More

ಜನರಿಕ್ ಡ್ರಗ್ ಸ್ಟೋರ್ ನಲ್ಲಿ ಬೆಂಕಿ…ತಪ್ಪಿದ ಭಾರಿ ಹಾನಿ…

ಮೈಸೂರು,ಡಿ29,Tv10,ಕನ್ನಡ ಕೆ.ಆರ್.ಆಸ್ಪತ್ರೆ ಸ್ಟೋನ್ ಬಿಲ್ಡಿಂಗ್ ಆವರಣದಲ್ಲಿರುವ ಜನರಿಕ್ ಔಷಧಿ‌ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪಕ್ಕದಲ್ಲೇ ಕೆ.ಆರ್.ಆಸ್ಪತ್ರೆಗೆ ಸೇರಿದ ಗೋದಾಮಿಗೆ ವ್ಯಾಪಿಸಬೇಕಿದ್ದ ಬೆಂಕಿಯನ್ನ ಹತೋಟಿಗೆ ತಂದಿದ್ದಾರೆ. ಈ ಮೂಲಕ ಸಂಭವಿಸಬೇಕಿದ್ದ ಭಾರಿ ಹಾನಿಯನ್ನ ತಡೆಗಟ್ಟಿದ್ದಾರೆ.ಇಂದು ಭಾನುವಾರ ಕಾರಣ ಜನರಿಕ್ ಡ್ರಗ್ ಹೌಸ್ ಗೆ ರಜೆ ಇತ್ತು.ಈ ವೇಳೆ ಯುಪಿಎಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಬೆಂಕಿಯನ್ನ
Read More

ಲಾರಿ ಹರಿದು ಬೈಕ್ ಸವಾರ ಸಾವು…ರಸ್ತೆಯಲ್ಲೇ ಶವ ಇಟ್ಟು ಆಕ್ರೋಷ…

ಮೈಸೂರು,ಡಿ29,Tv10 ಕನ್ನಡ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಮೈಸೂರು ಗದ್ದಿಗೆ ಮುಖ್ಯ ರಸ್ತೆಯ ಮಾರೇಗೌಡನಹಳ್ಳಿ ಗೇಟ್ ಸಮೀಪ ನಡೆದಿದೆ.ಹೆಚ್ ಡಿ ಕೋಟೆ ತಾಲೂಕಿನ ಕೆ.ಬೆಳ್ತೂರು ಗ್ರಾಮದ ತಿಮ್ಮನಾಯಕ ಪುತ್ರ ಸತೀಶ್ (27) ಮೃತ‌ ದುರ್ದೈವಿ.ಮೃತ ಸತೀಶ್ ಅಕ್ಕನ ಮಗ ಶಿವು (13) ಗಂಭೀರ ಗಾಯಗೊಂಡಿದ್ದಾನೆ.ಬೈಕ್ ನಲ್ಲಿ ಅಕ್ಕನ ಮಗನ ಜೊತೆ ಮೈಸೂರಿನಿಂದ ಸ್ವಗ್ರಾಮಕ್ಕೆ ತೆರಳುವಾಗ ದುರ್ಘಟನೆ ನಡೆದಿದೆ.ರೋಡ್ ರೋಲರ್ ಹೊತ್ತು ಗದ್ದಿಗೆ ಕಡೆಯಿಂದ ಬರುತ್ತಿದ್ದ ಲಾರಿ ತಿರುವಿನಲ್ಲಿ
Read More

ಸಾಲಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ…

ಪಿರಿಯಾಪಟ್ಟಣ,ಡಿ29,Tv10 ಕನ್ನಡ ಸಾಲಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಗ್ರಾಮದಲ್ಲಿ ನಡೆದಿದೆ.ರಮೇಶ್ (42) ಮೃತ ದುರ್ದೈವಿ.ಕೃಷಿಯ ಜೊತೆಗೆ ಪಾರ್ಟ್ ಟೈಮ್ ಆಟೋ ಓಡಿಸುತ್ತಿದ್ದ ರಮೇಶ್ಕೃಷಿಗಾಗಿ ಸೊಸೈಟಿಯಲ್ಲಿ ಸಾಲ ಹಾಗೂ ಕೈ ಸಾಲ ಮಾಡಿದ್ದರು.ಸಾಲ ತೀರಿಸಲಾಗದೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More

ಭೋಗ್ಯಕ್ಕೆ ಹೋದ ಕುಟುಂಬದ ಪಜೀತಿ…ಹಣವೂ ಇಲ್ಲ…ಮನೆಯೂ ಇಲ್ಲ…ಅತಂತ್ರಕ್ಕೆ ಸಿಲುಕಿದ ಕುಟುಂಬ…

ಮೈಸೂರು,ಡಿ28,Tv10 ಕನ್ನಡ ಭೋಗ್ಯಕ್ಕಾಗಿ ಕರಾರು ಮಾಡಿಕೊಂಡ ಕುಟುಂಬವೊಂದು ಮಾಲೀಕನ ವಂಚನೆಗೆ ಸಿಲುಕಿ ಪಜೀತಿ ಅನುಭವಿಸುತ್ತಿರುವ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಭೋಗ್ಯಕ್ಕಾಗಿ ನೀಡಿದ ಹಣವೂ ಇಲ್ಲ…ವಾಸಕ್ಕೆ ಮನೆಯೂ ಇಲ್ಲದಂತಾಗಿ ಕುಟುಂಬ ಅತಂತ್ರಕ್ಕೆ ಸಿಲುಕಿದೆ.ಇದೀಗ ಕುಟುಂಬ ನ್ಯಾಯಕ್ಕಾಗಿ ನ್ಯಾಯಾಲಯದ ಮೂಲಕ ಮಂಡಿ ಪೊಲೀಸ್ ಠಾಣೆಯಲ್ಲಿ ಮಾಲೀಕನ ವಿರುದ್ದ ವಂಚನೆ ಪ್ರಕರಣ ದಾಖಲಿಸಿದೆ. ಮಹಮದ್ ಷರೀಪ್ ಎಂಬುವರು ಮಂಡಿಮೊಹಲ್ಲಾದ ಸಾಜದ್ ಆಲಿ ರೋಡ್ ನ ಮನೆ ನಂ 3001 new no
Read More

ನೂತನ ವರ್ಷ ಸ್ವಾಗತಕ್ಕೆ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಸಕಲ ಸಿದ್ದತೆ…2 ಲಕ್ಷ ಲಡ್ಡು ವಿತರಣೆಗೆ ಸಜ್ಜು…

ಮೈಸೂರು,ಡಿ28,Tv10 ಕನ್ನಡ 2025 ನೂತನ ವರ್ಷ ಸ್ವಾಗತಿಸಲು ಮೈಸೂರು ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲು ಸಿದ್ದತೆ ನಡೆದಿದೆ.ಕಳೆದ 10 ದಿನಗಳಿಂದ ಲಡ್ಡು ತಯಾರಿ ಕಾರ್ಯ ಭರದಿಂದ ಸಾಗಿದೆ.ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಸುಮಾರು 100 ಕ್ಕೂ ಹೆಚ್ಚು ಬಾಣಸಿಗರಿಂದ ಲಡ್ಡು ಸಿದ್ದವಾಗುತ್ತಿದೆ.2 ಕೆಜಿ ತೂಕದ 10 ಸಾವಿರ ಲಡ್ಡು,150 ಗ್ರಾಂ ತೂಕದ 2 ಲಕ್ಷ
Read More

ಮೈಸೂರಿನ 3 ಶಾಲೆಗಳಿಗೆ ಬಾಂಬ್ ಬೆದರಿಕೆ…ಪರಿಶೀಲನೆ ನಂತರ ಹುಸಿಯಾದ ತ್ರೆಟ್…

ಮೈಸೂರು,ಡಿ27,Tv10 ಕನ್ನಡ ಮೈಸೂರಿನ ಮೂರು ವಿದ್ಯಾಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.ಪರಿಶೀಲನೆ ನಂತರ ಬೆದರಿಕೆ ಹುಸಿಯಾಗಿ ಆತಂಕ ನಿವಾರಣೆಯಾಗಿದೆ. ಜಯಲಕ್ಷ್ಮಿಪುರಂ ನಲ್ಲಿರುವ ವಿದ್ಯಾಶ್ರಮ,ಮೇಟಗಳ್ಳಿಯಲ್ಲಿರುವ ಫ್ಯೂಚರ್ ಫೌಂಡೇಶನ್ ಕಾಲೇಜು ಹಾಗೂ ಮೈಕಾ ಶಾಲೆಗೆ ಬೆದರಿಕೆ ಸಂದೇಶ ಬಂದಿದೆ.ಫ್ಯೂಚರ್ ಫೌಂಡೇಶನ್ ಹಾಗೂ ಮೈಕಾ ಸಂಸ್ಥೆಗಳಿಗೆ ವಾಟ್ಸಾಪ್ ಮೂಲಕ ಸಂದೇಶ ಬಂದಿದೆ ವಿದ್ಯಾಶ್ರಮಕ್ಕೆ ಫೋನ್ ಮೂಲಕ ಕರೆ ಬಂದಿದೆ ಎನ್ನಲಾಗಿದೆ.ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಕೂಲಂಕುಷ ಪರಿಶೀಲನೆ ನಂತರ ಹುಸಿಬೆದರಿಕೆ ಎಂದು ಖಚಿತವಾಗಿದೆ.ಕೆಲವು ದಿನಗಳ
Read More