ದೇವರಾಜ ಠಾಣೆ ಪೊಲೀಸರ ಕಾರ್ಯಾಚರಣೆ…ಕಳ್ಳತನವಾಗಿದ್ದ ಮಗು ಕೇವಲ ಐದು ಗಂಟೆಯಲ್ಲಿ ಪತ್ತೆ…ಆರೋಪಿ ಅಂದರ್…

ದೇವರಾಜ ಠಾಣೆ ಪೊಲೀಸರ ಕಾರ್ಯಾಚರಣೆ…ಕಳ್ಳತನವಾಗಿದ್ದ ಮಗು ಕೇವಲ ಐದು ಗಂಟೆಯಲ್ಲಿ ಪತ್ತೆ…ಆರೋಪಿ ಅಂದರ್…

ಮೈಸೂರು,ಮಾ18,Tv10 ಕನ್ನಡ
ಚಲುವಾಂಬ ಆಸ್ಪತ್ರೆಯಲ್ಲಿ ಕಳ್ಳತನ ಮಾಡಿದ್ದ ಮಗುವನ್ನ ಕೇವಲ 5 ಗಂಟೆಯಲ್ಲಿ ಪತ್ತೆ ಮಾಡಿ ತಾಯಿಗೊಪ್ಪಿಸಿದ ದೇವರಾಜ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.ಮಗು ಇಲ್ಲದ ಕಾರಣ ಕಳ್ಳತನ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಚೆಲುವಾಂಬ ಆಸ್ಪತ್ರೆ ಯ ವಾರ್ಡ್ ನಲ್ಲಿ ಸುಶ್ರುಷೆ ಪಡೆಯುತ್ತಿದ್ದ ದಸುಮತಿ ಎಂಬುವವರ 11 ದಿನದ ಮಗುವನ್ನು ಅಪರಿಚಿತ ಹೆಂಗಸೊಬ್ಬರು ನಿನ್ನೆ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಮಗುವಿನ ತಂದೆ ಪ್ರೇಮಮಾಜಿಯನ್ನ ಸಂಪರ್ಕಿಸಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರಬೇಕು ಅಲ್ಲಿ ಗಂಡಸರಿಗೆ ಪ್ರವೇಶ ಇಲ್ಲಾ ಎಂದು ಸುಳ್ಳು ಹೇಳಿ ನಂಬಿಸಿ ಮಗುವನ್ನು ಪಡೆದುಕೊಂಡು ಪರಾರಿಯಾಗಿದ್ದಳು. ನಂತರ ಪ್ರೇಮ ಹಾಗೂ ಆಸ್ಪತ್ರೆ ಯ ಸಿಬ್ಬಂದಿಗಳು ಮಗುವನ್ನು ಎಲ್ಲ ಕಡೆ ಹುಡುಕಿ ಸಿಗದೇ ಇದ್ದ ಕಾರಣ ದೇವರಾಜ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ವಿಷಯ ತಿಳಿದು ತಕ್ಷಣ ಆಸ್ಪತ್ರೆ ಧಾವಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಬಿ. ಶಿವಕುಮಾರ್, ಸಬ್ ಇನ್ಸ್ ಪೆಕ್ಟರ್ ಎಂ. ಜೈ ಕೀರ್ತಿ ಹಾಗೂ ಸಿಬ್ಬಂದಿ ಪ್ರವೀಣ್, ಪ್ರದೀಪ್ ಹಾಗೂ ಸುರೇಶ್ ರವರುಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಆಸ್ಪತ್ರೆ ಯ ಸಿಸಿ ಕ್ಯಾಮರಾ ಪರಿಶೀಲಿಸಿ ಹಾಗೂ ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ ಸಂಗ್ರಹಿಸಿ ಅಪರಿಚಿತ ಮಹಿಳೆ ಹೋಗಿರುವ ದಾರಿಯಲ್ಲಿ ಪರಿಶೀಲನೆ ನಡೆಸಿ ಆಕೆ ಹೋಗಿದ್ದ ಆಟೋ ರಿಕ್ಷಾ ಪತ್ತೆ ಮಾಡಿ ಆಕೆ ಇಳಿದುಕೊಂಡಿದ್ದ ಕುಂಬಾರ ಕೊಪ್ಪಲು ಏರಿಯಾವನ್ನು ಪೂರ್ತಿಯಾಗಿ ಹುಡುಕಾಡಿ ಕೊನೆಗೆ ಆಕೆ ತೆರಳಿದ್ದ ಮನೆಯ ನ್ನು ಪತ್ತೆ ಮಾಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಮಗು ತಾಯಿಯ ಹಾಲಿಲ್ಲದೆ ನಿತ್ರಾಣವಾಗಿತ್ತು.ತಕ್ಷಣ ಮಗುವನ್ನು ತ್ವರಿತವಾಗಿ ತಾಯಿಗೆ ತಂದು ಒಪ್ಪಿಸಿದ್ದಾರೆ. ತಾಯಿಯ ಹಾಲಿಲ್ಲದೆ ಅಳುತ್ತಿದ್ದ ಕಂದಮ್ಮ ಹಾಗೂ ತನ್ನ ಮಗುವನ್ನು ಕಾಣದೆ ಅತ್ತು ನಿತ್ರಾಣಗೊಂಡಿದ್ದ ಬಾಣಂತಿ ತಾಯಿ ಒಂದಾಗಿದ್ದಾರೆ. ಸ್ಥಳದಲ್ಲಿದ್ದ ಜನರು, ಪೊಲೀಸರ ಕ್ಷಿಪ್ರ ಕಾರ್ಯಚರಣೆಯನ್ನ ಸಾರ್ವಜನಿಕರು ಶ್ಲಾಘಸಿ ಅಭಿನಂದಿಸಿದ್ದಾರೆ.
ಮಗು ಕಳ್ಳತನ ಮಾಡಿದ್ದ ಅಪರಿಚಿತ ಮಹಿಳೆ ಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆಕೆ ತನಗೆ 7ವರ್ಷ ದಿಂದ ಮಗುವಿಲ್ಲದೇ ಇದ್ದ ಕಾರಣ ಈ ಕೃತ್ಯ ಮಾಡಿದ್ದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾಳೆ. ತ
ತ್ವರಿತ ಕಾರ್ಯಾಚರಣೆ ಮಾಡಿ ಮಗುವನ್ನು ರಕ್ಷಣೆ ಮಾಡಿ ತಾಯಿಗೊಪ್ಪಿಸಿದ ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಬಿ. ಶಿವಕುಮಾರ್, ಸಬ್ ಇನ್ಸ್ ಪೆಕ್ಟರ್ ಎಂ. ಜೈ ಕೀರ್ತಿ ಹಾಗೂ ಸಿಬ್ಬಂದಿ ಪ್ರವೀಣ್, ಪ್ರದೀಪ್ ಹಾಗೂ ಸುರೇಶ್ ರವರುಗಳ ಕಾರ್ಯ ವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ…

Spread the love

Related post

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…
ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…

Leave a Reply

Your email address will not be published. Required fields are marked *