ಶಾಸಕ ಮಂಜುನಾಥ್ ವಿರುದ್ದ ಗೂಂಡಾಗಿರಿ ಆರೋಪ…ಕುರುಬ ಸಮಾಜದ ಮುಖಂಡರಿಂದ ದೂರು…

ಶಾಸಕ ಮಂಜುನಾಥ್ ವಿರುದ್ದ ಗೂಂಡಾಗಿರಿ ಆರೋಪ…ಕುರುಬ ಸಮಾಜದ ಮುಖಂಡರಿಂದ ದೂರು…

  • Politics
  • March 24, 2023
  • No Comment
  • 197

ಶಾಸಕ ಮಂಜುನಾಥ್ ವಿರುದ್ದ ಗೂಂಡಾಗಿರಿ ಆರೋಪ…ಕುರುಬ ಸಮಾಜದ ಮುಖಂಡರಿಂದ ದೂರು…

ಹುಣಸೂರು,ಮಾ24,Tv10 ಕನ್ನಡ
ಶಿಷ್ಠಾಚಾರ ಪಾಲನೆ ಮಾಡದ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ರವರಿಗೆ ಪ್ರಶ್ನಿಸಿದ ಕುರುಬ ಸಮಾಜದ ಮುಖಂಡನಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದು ಹಾಗೂ ಗೂಂಡಾಗಿರಿ ಪ್ರದರ್ಶಿಸಿದರೆಂದ ಆರೋಪಿಸಿ ಹುಣಸೂರು ಉಪವಿಭಾಗಾಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.ಮಾರ್ಚ್ 16 ರಂದು ಹುಣಸೂರಿನ ಕಲ್ಕುಣಿಕೆ ವೃತ್ತದಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಗುದ್ದಲಿಪೂಜೆ ನೆರವೇರಿಸಲು ಆಗಮಿಸಿದ ಶಾಸಕ ಮಂಜುನಾಥ್ ಶಿಷ್ಠಾಚಾರ ಪಾಲಿಸಿಲ್ಲವೆಂದು ಆರೋಪಿಸಿ ಸ್ಥಳದಲ್ಲಿದ್ದ ಅಧಿಕಾರಿಯನ್ನ ಕುರುಬಸಮಾಜದ ಮುಖಂಡರಾದ ಗಣೇಶ್ ಕುಮಾರ್ ಪ್ರಶ್ನಿಸಿದ್ದರು.ಈ ವೇಳೆ ಶಾಸಕ ಮಂಜುನಾಥ್ ಅವ್ಯಾಚ ಶಬ್ದಗಳಿಂದ ನಿಂದಿಸಿ ಗೂಂಡಾಗಿರಿ ಪ್ರದರ್ಶಿಸಿದರೆಂದು ಆರೋಪಿಸಿ ಗಣೇಶ್ ಕುಮಾರ್ ಹಾಗೂ ಕುರುಬಸಮಾಜದ ಮುಖಂಡರು ಇಂದು ಹುಣಸೂರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದಾರೆ.ಗೂಂಡಾಗಿರಿ ಪ್ರದರ್ಶಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿದ ಶಾಸಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಅಲ್ಲದೆ ಮುಂಬರುವ ಕಾರ್ಯಕ್ರಮಗಳಲ್ಲಿ ಶಿಷ್ಠಾಚಾರ ಪಾಲಿಸುವಂತೆ ಸೂಚನೆ ನೀಡುವಂತೆ ಕುರುಬ ಸಮಾಜದ ಮುಖಂಡರು ದೂರು ನೀಡಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *