ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಫೈಟ್…ರಾಮದಾಸ್.ರಾಜೀವ್ ನಡುವೆ ಜಿದ್ದಾಜಿದ್ದಿ…

ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಫೈಟ್…ರಾಮದಾಸ್.ರಾಜೀವ್ ನಡುವೆ ಜಿದ್ದಾಜಿದ್ದಿ…

  • Politics
  • March 28, 2023
  • No Comment
  • 188

ಮೈಸೂರು,ಮಾ28,Tv10 ಕನ್ನಡ
ಮೈಸೂರು ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಹಾಲಿ ಶಾಸಕ ಎಸ್.ಎ.ರಾಮದಾಸ್ ಹಾಗೂ ಮುಡಾ ಮಾಜಿ ಅಧ್ಯಕ್ಷ ರಾಜೀವ್ ನಡುವೆ ಜಿದ್ದಾಜಿದ್ದಿ ಶುರುವಾಗಿದೆ.ಒಂದೆಡೆಮುಡಾ ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾಜಿ ಆಗಿದ್ದರೂ
ಟಿಕೆಟ್‌ಗಾಗಿ ಹೆಚ್‌ವಿ ರಾಜೀವ್ ಪಟ್ಟುಬಿಡದೆ ಹೈ ಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಮತ್ತೊಂದೆಡೆ ಟಿಕೆಟ್ ಪಡೆಯಲು ಹಾಲಿ ಶಾಸಕ ರಾಮದಾಸ್ ಹರಸಹಾಸ ನಡೆಸುತ್ತಿದ್ದಾರೆ.
ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್‌ಗೆ ಟಿಕೆಟ್ ನೀಡುವಂತೆ ಒತ್ತಡ ಹೆಚ್ಚುತ್ತಿದೆ.
ಈಗಾಗಲೇ ರಾಮದಾಸ್ ವಿರುದ್ಧ ಬ್ರಾಹ್ಮಣ, ವೀರಶೈವ ಲಿಂಗಾಯತ ಸಮುದಾಯ ತಿರುಗಿ ಬಿದ್ದಿದೆ.ಒಂದೆಡೆ ರಾಮದಾಸ್‌ಗೆ ಟಿಕೆಟ್ ನೀಡದಂತೆ ಹೈಕಮಾಂಡ್ ಮೇಲೆ ನರಂತರವಾಗಿ ಒತ್ತಡ ಹೆರುತ್ತಿದ್ದರೆ
ಮತ್ತೊಂದೆಡೆ ರಾಜೀವ್‌ಗೆ ಟಿಕೆಟ್ ಸಿಗಲೆಂದು ಅಭಿಮಾನಿಗಳು ದೇವರ ಮೊರೆ ಹೋಗುತ್ತಿದ್ದಾರೆ.ಇಬ್ಬರ ನಾಯಕರ ನಡೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಗೊಂದಲ ಮೂಡಿಸಿರುವುದಲ್ಲದೆ
ಕುತೂಹಲ ಹೆಚ್ಚಿಸಿದೆ.ಇಬ್ಬರಲ್ಲಿ
ಯಾರಿಗೆ ಮಣೆ ಹಾಕಲಿದೆ ಹೈಕಮಾಂಡ್…?ಎಂಬ ಪ್ರಶ್ನೆ ಉದ್ಭವವಾಗಿದೆ.ಇಬ್ಬರ ಜಗಳ ಮೂರನೆಯವರಿಗೆ ಟಿಕೆಟ್ ಪಾಲಾಗಲಿದೆಯೇ ಎಂಬ ಆಂಶವೂ ಕ್ಷೇತ್ರದಲ್ಲಿ ಗಂಭೀರವಾಗಿ ಚರ್ಚೆ ನಡೆಯುತ್ತಿದೆ.
2013ರ ಚುನಾವಣೆಯಲ್ಲಿ ಕೆಜಿಪಿಯಿಂದ ಸ್ಪರ್ಧಿಸಿ ರಾಮದಾಸ್ ಸೋಲಿಗೆ ಕಾರಣವಾಗಿದ್ದ
ರಾಜೀವ್ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಬಲಿಗ.ಇದೀಗ ಮತ್ತೊಮ್ಮ ರಾಮದಾಸ್‌ಗೆ ಮುಳುವಾಗಲಿದ್ದಾರೆಯೇ ಅಥವಾ
ಕಳೆದ ಬಾರಿ ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು ಚುನಾವಣೆಯಿಂದ ಹಿಂದೆ ಸರಿದಂತೆ ಈ ಬಾರಿಯೂ ಇಂತಹ ನಿರ್ಧಾರ ಕೈಗೊಳ್ಳುವರೇ ಎಂಬ ಪ್ರಶ್ನೆ ಮೂಡಿದೆ.ಟಿಕೆಟ್ ಗಾಗಿ ಪಟ್ಟು ಹಿಡಿದರುವ ರಾಜೀವ್ ಮತ್ತೊಮ್ಮೆ ಸೋಲಿನ ರುಚಿ ತೋರಿಸಲು ಸಜ್ಜಾಗುತ್ತಿರುವಂತೆ ಭಾಸವಾಗುತ್ತಿದೆ.
ಕೆ.ಆರ್ ಕ್ಷೇತ್ರದಲ್ಲಿ ರಾಮದಾಸ್ ವಿರುದ್ಧ ದಿನೇ ದಿನೇ ಅಸಮಾಧಾನ ಹೆಚ್ಚಾಗುತ್ತಿದೆ. ಕ್ಷೇತ್ರದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ್ದರೂ ಬ್ರಾಹ್ಮಣ ಹಾಗೂ ಲಿಂಗಾಯಿತ,ವೀರಶೈವ ವರ್ಗ ಯಾಕೋ ಮುನಿಸಿಕೊಂಡಿದೆ.ನಮ್ಮನ್ನ ಸಂಪೂರ್ಣ ಕಡೆಗಣಿಸಿದ್ದಾರೆಂದು ಈಗಾಗಲೇ ಎರಡೂ ವರ್ಗದ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಈ ಬಾರಿ ಟಿಕೆಟ್ ಬಯಸಿದ್ದೇನೆ.
ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ನಾಯಕರು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಪರವಾಗಿದ್ದಾರೆ.
ಈಗಾಗಲೇ ಸಾಕಷ್ಟು ಬಾರಿ ಹಾಲಿ ಶಾಸಕರಿಗೆ ಅವಕಾಶ ಕೊಟ್ಟಿದ್ದಾರೆ.
ಈಗ ಕ್ಷೇತ್ರದ ಜನ ಹೊಸ ಮುಖ ಬಯಸಿದ್ದಾರೆ ಎಂದು ರಾಜೀವ್ ಹೇಳಿಕೆ ನೀಡಿದ್ದರೆ ತನಗೇ ಟಿಕೆಟ್ ಗ್ಯಾರೆಂಟಿ ಎಂಬ ವಿಶ್ವಾಸದಲ್ಲಿ ರಾಮದಾಸ್ ಇದ್ದಾರೆ.ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಇಬ್ಬರ ನಾಯಕರಲ್ಲೂ ತಳಮಳ ಹೆಚ್ಚಾಗುತ್ತಿದೆ.ಅಂತಿಮ ಛಾನ್ಸ್ ಯಾರಿಗೆ ಹೈಕಮಾಂಡ್ ಗೆ ಬಿಟ್ಟಿದ್ದು…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *