ತಂದೆ ಗೆಲುವಿಗೆ ಮಗನ ಸಾರಥ್ಯ…ಸಿದ್ದರಾಮಯ್ಯ ಪ್ರಚಾರದ ಜವಾಬ್ದಾರಿ ಹೊತ್ತ ಯತೀಂದ್ರ…

ತಂದೆ ಗೆಲುವಿಗೆ ಮಗನ ಸಾರಥ್ಯ…ಸಿದ್ದರಾಮಯ್ಯ ಪ್ರಚಾರದ ಜವಾಬ್ದಾರಿ ಹೊತ್ತ ಯತೀಂದ್ರ…

ತಂದೆ ಗೆಲುವಿಗೆ ಮಗನ ಸಾರಥ್ಯ…ಸಿದ್ದರಾಮಯ್ಯ ಪ್ರಚಾರದ ಜವಾಬ್ದಾರಿ ಹೊತ್ತ ಯತೀಂದ್ರ…

ಮೈಸೂರು,ಏ1,Tv10 ಕನ್ನಡ
ತಂದೆ ಗೆಲ್ಲಿಸುವ ಹೊಣೆ ಮಗನ ಹೆಗಲಿಗೆ ಬಿದ್ದಿದೆ.ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಪ್ರಚಾರಕ್ಕೆ ಬರೋದು ಒಂದೆರಡು ದಿನ ಮಾತ್ರ. ಒಮ್ಮೆ ನಾಮಪತ್ರ ಸಲ್ಲಿಕೆ, ಮತ್ತೊಮ್ಮೆ ಕ್ಷೇತ್ರ ಸಂಚಾರಕ್ಕೆ ಬರುವ ಸಾಧ್ಯತೆ ಅಷ್ಟೇ.ಉಳಿದ ಎಲ್ಲಾ ಜವಾಬ್ದಾರಿ ನಿರ್ವಹಣೆ ಮಗ ಯತೀಂದ್ರ ಸಿದ್ದರಾಮಯ್ಯ ಹೆಗಲಿಗೆ ಏರಿಸಲಾಗಿದೆ.
ಬೆಂಗಾವಲು ಪಡೆಯಿಂದಲೇ ಚಾಮುಂಡೇಶ್ವರಿಯಲ್ಲಿ ಸೋಲು ಅನುಭವಿಸಿದ್ದ ಸಿದ್ದರಾಮಯ್ಯ.
ವರುಣದಲ್ಲಿ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದಾರೆ.
ಇಡೀ ಚುನಾವಣೆ ಜವಾಬ್ದಾರಿ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೆಗಲಿಗೆ ಹಾಕಲಾಗಿದೆ.
ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದಾರೆ.ಇಂದು
ರಂಗಸಮುದ್ರ ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ.
ತಳಮಟ್ಟದಲ್ಲಿ ಮತದಾರರು, ಕಾರ್ಯಕರ್ತರು, ಮುಖಂಡರ ನಡುವೆ ಸಮನ್ವಯ ಸಾಧಿಸಿರುವ ಯತೀಂದ್ರ ತಂದೆಯ ಗೆಲುವಿಗೆ ಪ್ರಮುಖ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.

ಸಧ್ಯ ಸಿದ್ದರಾಮಯ್ಯ ಸ್ಪರ್ಧೆಯಿಂದ ವರುಣ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ.ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಸುಲಭವಾದಂತೆ ಕಾಣುತ್ತಿದೆ.
ಕೊನೆ ಚುನಾವಣೆ ಗೆಲ್ಲಲು ಸಿದ್ದು ದಾರಿ ಸುಲಭ ಎನ್ನಲಾಗುತ್ತಿದೆ.
ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ ಯತೀಂದ್ರ ನಿರ್ಧಾರ ಸಾರ್ಥಕವಾಗಬೇಕಿದೆ.ಈ ಹಿನ್ನಲೆ ತಂದೆಗಾಗಿ ಪ್ರಚಾರ ಆರಂಭಿಸಿದ್ದಾರೆ.
ವಿಜಯೇಂದ್ರ ವರುಣದಿಂದ ಸ್ಪರ್ಧಿಸಲ್ಲ ಎಂದು ಯಡಿಯೂರಪ್ಪ ಘೋಷಣೆ ನಂತರ ಕಾಂಗ್ರೆಸ್ಸಿಗರು ನಿರಾಳರಾಗಿದ್ದಾರೆ.
ವರುಣದಲ್ಲಿ ನೇರಹಣಾಹಣಿ ತಪ್ಪಿದ್ದರಿಂದ ಸಿದ್ದು ಗೆಲವು ಸುಲಭ ಎನ್ನಲಾಗುತ್ತಿದೆ. ಯಡಿಯೂರಪ್ಪ ನಿರ್ಧಾರ ವರುಣಾ ಕ್ಷೇತ್ರದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡುತ್ತಿದೆ.
ಕಾಂಗ್ರೆಸ್ ಪರವಾಗಿ ರಾಜ್ಯಾದ್ಯಂತ ಸಿದ್ದು ಪ್ರವಾಸ ಕೈಗೊಳ್ಳಲಿದ್ದಾರೆ.
ವರುಣಾದಲ್ಲಿ ಜೆಡಿಎಸ್ ಅಷ್ಟಾಗಿ ಪ್ರಾಬಲ್ಯವಿಲ್ಲ,
ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಯುತ್ತಿದೆ.
ಮತ್ತೆ ಕಾ.ಪು ಸಿದ್ದಲಿಂಗಸ್ವಾಮಿ ಹೆಸರು ಮುನ್ನಲೆಗೆ ಬಂದಿದೆ.
2013 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸಿದ್ದುಗೆ ಪೈಪೋಟಿ ನೀಡಿದ್ದ ಕಾ.ಪು.
ಈ ಬಾರಿಯೂ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಈಗಾಗಲೇ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.
ವಿಜಯೇಂದ್ರ ಬರುತ್ತಾರೆಂದು ಸೈಲೆಂಟಾಗಿದ್ದ ಕಮಲ ಪಡೆಯ ಆಕಾಂಕ್ಷಿಗಳು.
ಇದೀಗ ವಿಜಯೇಂದ್ರ ಕಣದಿಂದ ಹಿಂದೆ ಸರಿದದ್ದರಿಂದ ಚುರುಕಾದ ಲಾಭಿ ಶುರುವಾಗಿದೆ…

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *