- May 23, 2023
ಕಾಮಗಾರಿಗಳ ಬಿಲ್ ಪಾವತಿಗೆ ಬ್ರೇಕ್…ತಡೆ ಹಿಡಿಯುವಂತೆ ಸಿಎಂ ನಿರ್ದೇಶನ…

ಬೆಂಗಳೂರು,ಮೇ22,Tv10 ಕನ್ನಡ
ಹಿಂದಿನ ಸರ್ಕಾರ ಕೈಗೊಂಡಿರುವ ಎಲ್ಲಾ ಇಲಾಖೆಗಳ ಹಾಗೂ ಸರ್ಕಾರಿ ಇಲಾಖೆಗಳ ಅಧೀನಕ್ಕೆ ಒಳಪಡುವ ಎಲ್ಲಾ ಪ್ರಾಧಿಕಾರ,ನಿಗಮ,ಮಂಡಳಿಗಳಲ್ಲಿ ನಡೆದಿರುವ ಕಾಮಗಾರಿಗಳ ಬಿಲ್ ಪಾವತಿಯನ್ನ ತಡೆ ಹಿಡಿಯುವಂತೆ ಮುಖ್ಯಮಂತ್ರಿಗಳಿಂದ ನಿರ್ಧೇಶನ ರವಾನೆ ಆಗಿದೆ.ಇಂದಿನಿಂದಲೇ ಜಾರಿಗೆ ತರುವಂತೆ ಆದೇಶಿಸಲಾಗಿದೆ.ಅಲ್ಲದೆ ಪ್ರಾರಂಭವಾಗಬೇಕಿದ್ದ ಕಾಮಗಾರಿಗಳನ್ನೂ ಸಹ ತಡೆಹಿಡಿಯುವಂತೆ ಸೂಚನೆ ನೀಡಲಾಗಿದೆ.ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ.ಏಕ್ ರೂಪ ಕೌರ್ ರವರು ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ…