- May 23, 2023
ಭಾರಿ ಮಳೆಗಾಳಿಗೆ ತತ್ತರಿಸಿದ ಸರಗೂರು ಜನತೆ…ಬೆಳೆ ನಾಶ…


ಭಾರಿ ಮಳೆಗಾಳಿಗೆ ತತ್ತರಿಸಿದ ಸರಗೂರು ಜನತೆ…ಬೆಳೆ ನಾಶ…

ಮೈಸೂರು,ಮೇ23,Tv10 ಕನ್ನಡ
ಭಾರೀ ಗಾಳಿ ಮಳೆ
ಸರಗೂರಿನಲ್ಲಿ ಅಪಾರ ಹಾನಿಯಾಗಿದೆ.
ಬಿರುಗಾಳಿ ಸಹಿತ ಸುರಿದ ಮಳೆಗೆ ಸರಗೂರಿನ ಜನ ತತ್ತರಿಸಿದ್ದಾರೆ.
ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಿರುಗಾಳಿಗೆ ಹಂಚಿಪುರ ಗ್ರಾಮ ಪಂಚಾಯತಿ ಕಚೇರಿಯ ಮೇಲ್ಚಾವಣಿ ನೆಲಕಚ್ಚಿದೆ.
ಕಚೇರಿಯ ಪೀಠೋಪಕರಣಗಳು, ಕಂಪ್ಯೂಟರ್‌ಗಳು, ಲ್ಯಾಪ್ಟಾಪ್ ಗಳು, ಯುಪಿಎಸ್ ಗೆ ಹಾನಿಯಾಗಿದೆ.
ಹಂಚಿಪುರದ ನಂದೀಶ್ ಎಂಬಯವರ ಜಮೀನಿನಲ್ಲಿ ಬಿರುಗಾಳಿಗೆ ಬಾಳೆ ಬೆಳೆ, ತೆಂಗಿನ ಮರಗಳು ಸಂಪೂರ್ಣ ನಾಶವಾಗಿದೆ.
ಸಿದ್ದಾಪುರ ಗ್ರಾಮದಲ್ಲಿ ಮಹದೇವಸ್ವಾಮಿ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಮರಗಳು ಧರೆಗೆ ಉರುಳಿದೆ.
ಸಿದ್ದಾಪುರ ಮಹೇಶ್ ಎಂಬುವರಿಗೆ ಸೇರಿದ ಶ್ರೀ ಮಹದೇಶ್ವರ ಹೈಟೆಕ್ ನರ್ಸರಿಯ ಮೇಲ್ಚಾವಣಿ ಕುಸಿತವಾಗಿದೆ.
ಮೆಣಸಿ, ಬದನೆ, ಟೊಮೊಟೊ ಪೈರುಗಳು ನಾಶವಾಗಿದೆ.
ಸಿದ್ದಾಪುರ ಗ್ರಾಮದ ಗದ್ದಿಗೆ ದೇವಸ್ಥಾನದ ಅರ್ಚಕ ಎಸ್ ವಿ ಮಾದೇವಸ್ವಾಮಿಯವರ 3 ಎಕರೆ ಬಾಳೆ ತೋಟ ಹಾಗೂ ಮರಗಳು ಸಂಪೂರ್ಣ ನಾಶವಾಗಿದೆ…
