ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಆಂಜಿಯೋ ಪ್ಲಾಸ್ಟ್ ಉಚಿತ ಕಾರ್ಯಾಗಾರ…200 ಬಡರೋಗಿಗಳಿಗ ಉಚಿತ ಸ್ಟಂಟ್ ಅಳವಡಿಕೆ…
- MysoreTV10 Kannada Exclusive
- May 24, 2023
- No Comment
- 126

ಮೈಸೂರು,ಮೇ24,Tv10 ಕನ್ನಡ
ಜಯದೇವ ಹೃದ್ರೋಗ ವಿಜ್ಞನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಂಜಿಯೋ ಪ್ಲಾಸ್ಟ್ ಕಾರ್ಯಾಗಾರ ಹಾಗೂ 200 ಬಡ ರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜೂನ್ 12 ರಿಂದ ಜೂನ್ 18 ರವರೆಗೆ ಕಾರ್ಯಕ್ರಮ ನಡೆಯಲಿದೆ.ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಜೂನ್ 12 ರಂದ 14 ರವರೆಗೆ,ಮೈಸೂರು ಶಾಖೆಯಲ್ಲಿ ಜೂನ್ 15 ಮತ್ತು 16 ಹಾಗೂ ಕಲಬುರಗಿ ಶಾಖೆಯಲ್ಲಿಜೂನ್ 17 ಮತ್ತು 18 ರಂದು ನಡೆಯಲಿದೆ. ಸೌಲಭ್ಯ ಪಡೆದುಕೊಳ್ಳುವ ರೋಗಿಗಳು ದಾಖಲಾತಿ ಸಂಧರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಕಡಿಮೆ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಪತ್ರಿಕಾ ಪ್ತಕಟಣೆಯಲ್ಲಿ ತಿಳಿಸಿದ್ದಾರೆ…