- May 24, 2023
ಹುಣಸೂರು:ಬೋನಿಗೆ ಬಿದ್ದ ಚಿರತೆ…ಸ್ಥಳೀಯರು ನಿರಾಳ…


ಹುಣಸೂರು,ಮೇ24,Tv10 ಕನ್ನಡ
ತೋಟವೊಂದರಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.ಹುಣಸೂರು ತಾಲೂಕಿನ ಕಿರಿಜಾಜಿ ಗ್ರಾಮದ ಫಾರ್ಮ್ ಹೌಸ್ ಆವರಣದಲ್ಲಿ ಇರಿಸಲಾಗಿದ್ದ ಬೋನಿಗೆ ಬಿದ್ದಿದೆ.ಜಾಫರ್ ಬೇಗ್ ಎಂಬುವರ ತೋಟದಲ್ಲಿ ಬೋನು ಇರಿಸಲಾಗಿತ್ತು.ಸಾಕು ಪ್ರಾಣಿಗಳನ್ನ ಹೊತ್ತೊಯ್ತುತ್ತಿದ್ದ ಚಿರತೆ ಉಪಟಳದಿಂದ ಸ್ಥಳೀಯರು ಬೇಸತ್ತಿದ್ದರು.ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು.ಸ್ಥಳೀಯರ ಮನವಿ ಮೇರೆಗೆ ಫಾರಂ ಹೌಸ್ ನ ಆವರಣದಲ್ಲಿ ಬೋನು ಇರಿಸಲಾಗಿತ್ತು. ಇಂದು ಬೆಳಿಗ್ಗೆ 8 ರ ಸಮಯದಲ್ಲಿ ಬೋನಿಗೆ ಬಿದ್ದಿದೆ. ಸುಮಾರು 3 ತಿಂಗಳ ಸತತ ಪ್ರಯತ್ನದಿಂದ ಇಂದು ಸೆರೆಯಾಗಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಹರೀಶ್ ಸೆರೆಯಾದ ಚಿರತೆಯನ್ನು ಅರಣ್ಯಕ್ಕೆ ಸ್ಥಳಾಂತರಿಸಿದರು.
ರಘು ಕಿರಿಜಾಜಿ,
ಹರೀಶ್ ಗೌಡ,
ಮನೋಜ್,
ಹೇಮಂತ್ ಸ್ಥಳಾಂತರ ಕಾರ್ಯಕ್ಕೆ ನೆರವಾದರು…