ನಾಳೆಯಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಜಾರಿ…ಮಧ್ಯಾಹ್ನ 1 ಗಂಟಗೆ ಉದ್ಘಾಟನೆ…ಸಿಎಂ ಸಿದ್ದರಾಮಯ್ಯ…

ಮೈಸೂರು,ಜೂ10,Tv10 ಕನ್ನಡ
ನಾಳೆಯಿಂದ ಮಹಿಳೆಯರ ಉಚಿತ ಸಾರಿಗೆ ಪ್ರಯಾಣ ಯೋಜನೆ ಜಾರಿ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಮಹಿಳೆಯರಿಗೆ ವೋಲ್ವೋ, ಎಸಿ ಬಸ್ ಬಿಟ್ಟು ಎಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣ ಆರಂಭವಾಗಲಿದೆ.
ರಾಜ್ಯದ ಒಳಗೆ ಮಾತ್ರ, ಬೇರೆ ರಾಜ್ಯಗಳಿಗೆ ಹೋದ್ರೆ ಇಲ್ಲ.ಹೊರ ರಾಜ್ಯಕ್ಕೆ ಹೋಗುವವರು ರಾಜ್ಯದ ಗಡಿ ವರೆಗೆ ಹೋಗಿ ನಂತರ ಟಿಕೇಟ್ ತಗೋಬೇಕು.
ನಾಳೆ ಮಧ್ಯಾಹ್ನ 1 ಗಂಟೆಯಿಂದ‌ ಯೋಜನೆ ಚಾಲು ಆಗುತ್ತೆ.ವಿಧಾನಸೌದದ ಬಳಿ ನಾನು, ಡಿಸಿಎಂ ಹಾಗೂ ಸಾರಿಗೆ ಮಂತ್ರಿ ಜಾರಿ ಮಾಡುತ್ತೇವೆ.
ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಏಕಕಲಾದಲ್ಲಿ ಜಾರಿಯಾಗಲಿದೆ ಎಂದು ತಿಳಿಸಿದರು.
ವರುಣ ತಾಲೂಕು ಕೇಂದ್ರ ಬೇಡಿಕೆ ವಿಚಾರ.
ಜನ ವರುಣ ತಾಲೂಕು ಮಾಡಿ ಅಂತ ಕೇಳಿಲ್ಲ.
ಬಿಜೆಪಿ ಬಸವರಾಜ ಬೊಮ್ಮಾಯಿ ಹೇಳಿದ್ದು.
ನಾನು ಮೂರು ದಿನ ಪ್ರಚಾರದಲ್ಲಿ ಎಲ್ಲೂ ಜನ ಕೇಳಿಲ್ಲ.
ಬಸವರಾಜ ಬೊಮ್ಮಾಯಿ ಹೇಳಿದ್ರೆ ಮಾಡಲ್ಲ.
ಜನ ಕೇಳಿದ್ರೆ ಬೇಕಾದ್ರೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಜುಲೈ 1 ರಿಂದ ಗುಲ್ಬರ್ಗದಲ್ಲಿ ಗೃಹಜ್ಯೋತಿ ಲಾಂಚ್ ಆಗುತ್ತೆ.
ಜುಲೈ 1 ರಂದೇ ಹತ್ತು ಕೆಜಿ ಆಹಾರ ಧಾನ್ಯ ಕೊಡುವ ಜೋಜನೆ ಮೈಸೂರಿನಲ್ಲಿ ಚಾಲನೆ ನೀಡಲಾಗುತ್ತದೆ.
ಜುಲೈ 16 ರಿಂದ ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಆಗುತ್ತೆ.
2022-23ರಲ್ಲಿ ಪಾಸ್ ಆದ ಪದವಿ, ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳು 24 ತಿಂಗಳಲ್ಲಿ ಕೆಲಸ ಸಿಗದಿದ್ದರೆ ಹಣ.
ಮಧ್ಯೆ ಸರ್ಕಾರಿ ಅಥವಾ ಖಾಸಗಿ ಕೆಲಸ ಸಿಕ್ಕರೆ ಅವರಿಗೆ ಹಣ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ
ಸರ್ಕಾರದ ತಲೆನೋವು ನಿಮಗ್ಯಾಕೆ ಎಂದು ಪ್ರಶ್ನಿಸಿದರು.
ನಾವು ಹೇಳಿದಂತೆ ಯೋಜನೆ ಜಾರಿ ಮಾಡುತ್ತೇವೆ.
ವಿದ್ಯುತ್ ದರವನ್ನ ಪ್ರತಿ ವರ್ಷ ರೆಗ್ಯುಲೇಟರಿ ಕಮಿಷನ್ ದರ ಪರಿಷ್ಕರಣೆ ಮಾಡುತ್ತೆ.
ಜೂನ್ 1 ರಿಂದ ಜಾರಿ ಮಾಡುತ್ತಾರೆ.ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ವಿದ್ಯುತ್ ದರ ಪರಿಷ್ಕರಣೆ ಆಗಿದೆ ಎಂದು ಸ್ಪಷ್ಟಪಡಿಸಿದರು
ನಾನು ಏನ್ ಹೇಳಿದ್ದೇವೆ ಅದನ್ನೇ ಮಾಡುತ್ತೇವೆ.
ಬಿಜೆಪಿಯವರಂತೆ ಸುಳ್ಳು ಹೇಳುವುದಿಲ್ಲ.
ನಾನು ಅಧಿಕಾರ ಇರಲಿ, ಇಲ್ಲದಿರಲಿ ಒಂದೇ ರೀತಿ ಇರುತ್ತೇನೆ ಎಂದರು…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *