ಕಬಿನಿ ಜಲಾಶಯ ಭದ್ರತಾ ಕೊಠಡಿಗೆ ನುಗ್ಗಿದ ಲಾರಿ…ತಪ್ಪಿದ ಅನಾಹುತ…
- CrimeMysore
- June 19, 2023
- No Comment
- 83

ಕಬಿನಿ ಜಲಾಶಯ ಭದ್ರತಾ ಕೊಠಡಿಗೆ ನುಗ್ಗಿದ ಲಾರಿ…ತಪ್ಪಿದ ಅನಾಹುತ…

ಹೆಚ್.ಡಿ.ಕೋಟೆ,ಜೂ18,Tv10 ಕನ್ನಡ
ಇಳಿಜಾರಿನಲ್ಲಿ ನಿಂತಿದ್ದ ಲಾರಿ ಪೊಲೀಸ್ ಭದ್ರತಾ ಕೊಠಡಿಗೆ ನುಗ್ಗಿದ ಘಟನೆ ಹೆಚ್.ಡಿ.ಕೋಟೆ ತಾಲೂಕು
ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಬಳಿ ನಡೆದಿದೆ.
ಅದೃಷ್ಟವಶಾತ್ ಅನಾಹುತ ತಪ್ಪಿದೆ.
ಚಾಲಕ ಲಾರಿ ನಿಲ್ಲಿಸಿ ವಿಳಾಸ ಕೇಳುವಾಗ
ಇಳಿಜಾರು ಇದ್ದ ಕಾರಣ ಲಾರಿ ಚಲಿಸಿ ಸಮೀಪದಲ್ಲಿದ್ದ
ಪೊಲೀಸ್ ಭದ್ರತಾ ಕೊಠಡಿಗೆ ಢಿಕ್ಕಿ ಹೊಡೆದಿದೆ.ಕೊಠಡಿಯಲ್ಲಿ ಯಾವುದೇ ಸಿಬ್ಬಂದಿಗಳು ಇಲ್ಲದ ಕಾರಣ ಅನಾಹುತ ತಪ್ಪಿದಂತಾಗಿದೆ.
ಸ್ಥಳಕ್ಕೆ ಕಬಿನಿ ಜಲಾಶಯ ಹಿರಿಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ…