ಕೌಟುಂಬಿಕ ಕಲಹ…ಗೃಹಿಣಿ ನೇಣಿಗೆ ಶರಣು…
- CrimeMysore
- June 19, 2023
- No Comment
- 97
ಮೈಸೂರು,ಜೂ18,Tv10 ಕನ್ನಡ
ಕೌಟುಂಬಿಕ ಕಲಹ ಹಿನ್ನಲೆ ಮನನೊಂದ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೇರ್ಗಳ್ಳಿಯ ನ್ಯಾಯಾಂಗ ಬಡಾವಣೆಯಲ್ಲಿ ನಡೆದಿದೆ.ಲಿಲ್ಲಿ ಶಾಲಿನಿ(35) ಮೃತ ದುರ್ದೈವಿ.15 ವರ್ಷಗಳ ಹಿಂದೆ ಆಟೋ ಡ್ರೈವರ್ ಆಗಿರುವ ಭಾಸ್ಕರ್ ಎಂಬಾತನನ್ನ ವಿವಾಹವಾಗಿದ್ದ ಶಾಲಿನಿ ಎರಡು ಮಕ್ಕಳ ತಾಯಿ ಆಗಿದ್ದಳು.ಇಬ್ಬರು ಮಕ್ಕಳು ಹಾಸ್ಟೆಲ್ ನಲ್ಲಿ ತಂಗಿ ವಿದ್ಯಾಭ್ಯಾಸ ಮುಂದುವರೆಸಿದ್ದಾರೆ.ಭಾಸ್ಕರ್ ಹಾಗೂ ಶಾಲಿನಿ ನಡುವೆ ಸಾಮರಸ್ಯ ಇರಲಿಲ್ಲ.ಆಗಾಗ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆಗುತ್ತಿತ್ತು.ಇದೇ ವಿಚಾರದಲ್ಲಿ ಬೇಸತ್ತ ಶಾಲಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಭಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…