ಕೆರೆ ಒತ್ತುವರಿ ಆರೋಪ…ಗ್ರಾಮಸ್ಥರು ಹಾಗೂ ಒತ್ತುವರಿದಾರ ನಡುವೆ ಮಾತಿನ ಚಕಮಕಿ…ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ…

ಕೆರೆ ಒತ್ತುವರಿ ಆರೋಪ…ಗ್ರಾಮಸ್ಥರು ಹಾಗೂ ಒತ್ತುವರಿದಾರ ನಡುವೆ ಮಾತಿನ ಚಕಮಕಿ…ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ…

ಎಚ್.ಡಿ.ಕೋಟೆ,ಜೂ 19,Tv10 ಕನ್ನಡ


ಹೆಚ್.ಡಿ.ಕೋಟೆ ತಾಲೂಕು ಟೈಗರ್ ಬ್ಲಾಕ್ ನಲ್ಲಿರುವ ಮೈಸೂರು ಒಡೆಯರ್ ಚನ್ನಯ್ಯನ ಕಟ್ಟೆ ಕೆರೆ ಒತ್ತುವರಿ ಆರೋಪ ಕೇಳಿ ಬಂದಿದೆ. ತಡೆಯಲು ಹೋದ ಗ್ರಾಮಸ್ಥರೊಂದಿಗೆ ಒತ್ತುವರಿದಾರರು ಮಾತಿನ ಚಕಮಕಿ ನಡೆಸಿದ್ದಾರೆ.
ಕೆರೆ ಜಾಗ ಉಳುಮೆ ಹೆಚ್.ಡಿ.ಕೋಟೆ ತಾಲೂಕು ಕಸಬಾ ಹೋಬಳಿ ಕೆ.ಯಡತೊರೆ ಗ್ರಾಮದ ಸರ್ವೆ ನಂ.46 ರಲ್ಲಿರು 8.10 ಎಕ್ರೆ ಜಮೀನು ಚನ್ನಯ್ಯನ ಕಟ್ಟೆ ಕೆರೆ ಆಗಿದೆ.ಈ ಕೆರೆಯ ಅಂಚನ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.ಇದನ್ನ ತಡೆಯಲು ಹೋದ ಗ್ರಾಮಸ್ಥರ ವಿರುದ್ದ ಒತ್ತುವರಿದಾರರು ತಿರುಗಿ ಬಿದ್ದಿದ್ದಾರೆ.ಒತ್ತುವರಿ ಜಾಗದಲ್ಲಿ ಉಳುಮೆ ಮಾಡುವ ಯತ್ನ ನಡೆದಾಗ ಗ್ರಾಮಸ್ಥರು ತಡೆ ಹಿಡಿದಿದ್ದಾರೆ. ಇತ್ತೀಚೆಗಷ್ಟೆ ತಹಸೀಲ್ದಾರ್ ಸೂಚನೆ ನೀಡಿದ್ದರೂ ಕಿಮ್ಮತ್ತಿನ ಬೆಲೆ ಇಲ್ಲದಂತಾಗಿದೆ. ದಾಖಲಾತಿಗಳಿದ್ದರೂ ರಾಜವಂಶಸ್ಥರ ಕಾಲದ ಕೆರೆ ಉಳಿವಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗಾಗಲೆ ಕೆರೆಯ ಬಹುತೇಕ ಜಾಗ ಉಳುಮೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ.
ವನ್ಯಜೀವಿಗಳು ಜನ ಜಾನುವಾರುಗಳ ನೀರಿನ ದಾಹ ತಣಿಸಲು ನಿರ್ಮಾಣವಾಗಿರಯವ ಕೆರೆ ಇದೀಗ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಈ ಕೆರೆಯ ಉಳಿವಿಗಾಗಿ ಹುಣಸೂರು ಉಪವಿಭಾಗಾಧಿಕಾರಿಗಳು ಸಾಕಷ್ಟು ಬಾರಿ ತಹಸೀಲ್ದಾರ್ ಗೆ ಪತ್ರ ಬರೆದಿದ್ದಾರೆ.ಹೀಗಿದ್ದರೂ ಒತ್ತುವರಿ ಹೆಚ್ಚಾಗುತ್ತಲೇ ಇದೆ.ಮಾಹಿತಿ ಅರಿತ ಹೆಚ್.ಡಿ.ಕೋಟೆ ಪೊಲೀಸರು ಸ್ಥಳಕ್ಕಾಗಮಿಸಿ ತಹಸೀಲ್ದಾರ್ ಮಹೇಶ್ ಸೂಚನೆಯಂತೆ ನಾಮಪಲಕ ಇಲ್ಲದ ಜೆಸಿಬಿ ವಶಕ್ಕೆ ತೆಗೆದುಕೊಂಡಿದ್ದಾರೆ…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *