8 ದಿನಗಳಲ್ಲಿ ನಿವೃತ್ತಿ ಹೊಂದಬೇಕಿದ್ದ ಸೀನಿಯರ್ ಫಾರ್ಮಾಸಿಸ್ಟ್ ನೇಣಿಗೆ ಶರಣು…
- TV10 Kannada Exclusive
- July 22, 2023
- No Comment
- 55
ಮೈಸೂರು,ಜು22,Tv10 ಕನ್ನಡ
ಜುಲೈ 31 ಕ್ಕೆ ನಿವೃತ್ತಿ ಹೊಂದಬೇಕಿದ್ದ ಸೀನಿಯರ್ ಫಾರ್ಮಾಸಿಸ್ಟ್ ಮೈಸೂರಿನ ವಸತಿಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಬೆಂಗಳೂರಿನ ಇಂದಿರಾನಗರದ ಇಡಿ ಆಸ್ಪತ್ರೆಯಲ್ಲಿ ಸೀನಿಯರ್ ಫಾರ್ಮಾಸಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದಮೂರ್ತಿ ಮೃತ ದುರ್ದೈವಿ.ಲಷ್ಕರ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿಜಿ ರಸ್ತೆಯಲ್ಲಿರುವ ವಸತಿಗೃಹದಲ್ಲಿ ಜುಲೈ 20 ರಂದು ಕೊಠಡಿ ಬಾಡಿಗೆ ಪಡೆದು ತಂಗಿದ್ದರು.ಜುಲೈ 21 ರಂದು ಆನಂದಮೂರ್ತಿ ರವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಜೀವನದಲ್ಲಿ ಜಿಗುಪ್ಸೆ ಹೊಂದಿರುವ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪತ್ನಿ ಸರಸ್ವತಮ್ಮ ದೂರು ನೀಡಿದ್ದಾರೆ.ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…