ಪಿಎಸ್ಸೈ ಅಕ್ರಮ ನೇಮಕಾತಿ ಪ್ರಕರಣ… ನ್ಯಾಯಾಂಗ ತನಿಖಾ ಆಯೋಗ ರಚನೆ…ಸರ್ಕಾರದಿಂದ ಅಧಿಸೂಚನೆ…
- TV10 Kannada Exclusive
- July 22, 2023
- No Comment
- 64
ಬೆಂಗಳೂರು,ಜು21,Tv10 ಕನ್ನಡ
2021 ರಲ್ಲಿ ನಡೆದ ಪಿಎಸ್ಸೈ ಅಕ್ರಮ ನೇಮಕಾತಿ ಪ್ರಕ್ರಿಯೆ ಪ್ರಕರಣದ ತನಿಖೆಗೆ ಸರ್ಕಾರ ನ್ಯಾಯಾಂಗ ತನಿಖಾ ಆಯೋಗವನ್ನ ನೇಮಕ ಮಾಡಿದೆ.ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಏಕಸದಸ್ಯ ಆಯೋಗವನ್ನ ರಚಿಸಲಾಗಿದೆ.545 ಪಿಎಸ್ಸೈ ಗಳ ನೇರನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ವಿಚಾರವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಈ ಕುರಿತಂತೆ ನ್ಯಾಯಾಂಗ ತನಿಖೆ ಅತ್ಯವಶ್ಯಕವೆಂಬುದನ್ನ ಮನಗಂಡು ವಿಚಾರಣಾ ಆಯೋಗವನ್ನ ರಚಿಸಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನ ಉಲ್ಲಂಘಿಸಲಾಗಿದೆಯೇ,ಅಂತಹ ಅಕ್ರಮ ಯಾವುದು,ಹೇಗೆವುಲ್ಲಂಘನೆ ಆಗಿದೆ,ಯಾವಹಂತದಲ್ಲಿ ಅಕ್ರಮ ನಡೆದಿದೆ,ಇದರಲ್ಲಿ ದುರ್ಲಾಭ ಪಡೆದ ವ್ಯಕ್ತಿಗಳು ಯಾರು,ಮುಂದಿನ ದಿನಗಳಲ್ಲಿ ಪಾರದರ್ಶಕವಾಗಿ ಹಾಗೂ ಲೋಪರಹಿತವಾಗಿ ನೇಮಕಾತಿ ಪ್ರಕ್ರಿಯೆಯನ್ನ ನಡೆಸಲು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು ಯಾವುದು ಈ ಎಲ್ಲಾ ವಿಚಾರಗಳನ್ನ ಪರಿಶೀಲಿಸಿ ಮೂರು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ.ಸರ್ಕಾರದ ಅ್ಈನ ಕಾರ್ಯದರ್ಶಿ ಎಸ್.ಆರ್.ಬಾಣದರಂಗಯ್ಯ ರವರು ಅಧಿಸೂಚನೆ ಹೊರಡಿಸಿದ್ದಾರೆ…